ಪೋಲ್ಯಾಂಡ್: ಶೀತ ಮಾರುತಕ್ಕೆ ಇನ್ನೂ 10 ಮಂದಿ ಬಲಿ

ವಾರ್ಸಾ (ಪೋಲ್ಯಾಂಡ್), ಜ. 9: ಯುರೋಪ್‌ನಾದ್ಯಂತ ಬೀಸುತ್ತಿರುವ ಶೀತ ಮಾರುತದಿಂದಾಗಿ ಪೋಲ್ಯಾಂಡ್‌ನಲ್ಲಿ ರವಿವಾರ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಇದರೊಂದಿಗೆ ನವೆಂಬರ್ ಬಳಿಕ ದೇಶದಲ್ಲಿ ಶೀತಲ ವಾತಾವರಣದಿಂದ ಮೃತಪಟ್ಟವರ ಸಂಖ್ಯೆ 65ಕ್ಕೇರಿದೆ.
ಕೆಲವು ಸ್ಥಳಗಳಲ್ಲಿ ಉಷ್ಣತೆಯು ಮೈನಸ್ 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕೆಳಗಿಳಿದಿದೆ.ಈ ಚಳಿಗಾಲದಲ್ಲಿ ಈವರೆಗಿನ ಅವಧಿಯಲ್ಲಿ ರವಿವಾರ ಅತ್ಯಂತ ಭಯಾನಕ ದಿನವಾಗಿ ಪರಿಣಮಿಸಿದೆ.
‘‘ನಿನ್ನೆ 10 ಮಂದಿ ಚಳಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ’’ ಎಂದು ರಾಷ್ಟ್ರೀಯ ಭದ್ರತೆ ಕೇಂದ್ರ (ಆರ್‌ಸಿಬಿ) ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ವರ್ಷದ ಚಳಿಗಾಲದಲ್ಲಿ 3.8 ಕೋಟಿ ಜನಸಂಖ್ಯೆಯ ದೇಶದಲ್ಲಿ 77 ಮಂದಿ ಮೃತಪಟ್ಟಿದ್ದರು.
Next Story





