ಯಾವುದೇ ಕ್ಷಣದಲ್ಲಿ ಖಂಡಾಂತರ ಕ್ಷಿಪಣಿ ಹಾರಾಟ: ಉ. ಕೊರಿಯ

ಸಿಯೋಲ್, ಜ. 9: ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ನಾಯಕ ಕಿಮ್ ಜಾಂಗ್ ಉನ್ ನಿಗದಿಪಡಿಸುವ ಯಾವುದೇ ಸ್ಥಳದಿಂದ ಮತ್ತು ಯಾವುದೇ ಸಮಯದಲ್ಲಿ ಉಡಾಯಿಸಲು ಸಿದ್ಧ ಎಂದು ಉತ್ತರ ಕೊರಿಯ ರವಿವಾರ ಘೋಷಿಸಿದೆ.ಅದೇ ವೇಳೆ, ತನ್ನ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಅಮೆರಿಕದ ಪ್ರತಿಕೂಲ ನೀತಿಯೇ ಕಾರಣ ಎಂದು ಹೇಳಿದೆ.
ತನ್ನ ಪರಮಾಣು ಶಕ್ತ ರಾಷ್ಟ್ರ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯೊಂದರ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುವುದಕ್ಕೆ ಸನ್ನದ್ಧವಾಗಿದೆ ಎಂದು ಕಿಮ್ ಜನವರಿ ಒಂದರಂದು ಹೇಳಿದ್ದರು.
Next Story





