ಯಕ್ಷಮಂಗಳ ತಂಡದಿಂದ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ

ಕೊಣಾಜೆ, ಜ.9 : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ‘ಯಕ್ಷಮಂಗಳ’ ಸ್ನಾತಕೋತ್ತರ ವಿದ್ಯಾರ್ಥಿ ತಂಡದಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನವು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಉಜಿರೆಯ ಶ್ರೀ ಜನಾರ್ದನ ದೇವಸ್ಥಾನ, ಮಿತ್ರಮಂಡಳಿ ಮುಂಡಾಜೆ. ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಇನ್ನಿತರ ಸಹ ಸಂಘಟನೆಗಳ ಸಹಯೋಗದಲ್ಲಿ ನಡೆದ ಯಕ್ಷನವಮಿ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು ಪಾಂಚಜನ್ಯ ಪ್ರದರ್ಶನವನ್ನು ನೀಡಿದರು.
ಯಕ್ಷಗಾನ ಪ್ರದರ್ಶನದಲ್ಲಿ ಮಂಗಳೂರು ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಾದ ವಿನುತಾ ಡಿ, ಶೃತಿ ಎನ್.ಟಿ, ಅಶ್ವಿನಿ, ನಂದಿನಿ, ಸುಶ್ಮಾ, ಪ್ರಸಾದ್, ವಿನುತಾ ಕೆ, ಶಿಲ್ಪಾ, ವಿದ್ಯಾ, ಚಿತ್ರಶ್ರೀ, ಪ್ರವೀಣ ಕೆ, ಸೂರಜ್ ಬೈದ್ಯ, ಶ್ವೇತ, ಸಾಯಿಸುಮ, ಸವಿತಾ ಎಂ, ಸೌಮ್ಯ, ರಾಜೇಶ್ವರಿ ಮೊದಲಾದವರು ಕಲಾವಿದರಾಗಿ ಭಾಗವಹಿಸಿದ್ದರು.
ಹಿಮ್ಮೇಳದಲ್ಲಿ ಭಾಗವತರಾಗಿ ಪುಂಡಿಕಾ ಗೋಪಾಲಕೃಷ್ಣ ಬಲಿಪ, ಚೆಂಡೆಂಲ್ಲಿ ಸುದಾಸ್ ಕಾವೂರು, ಮದ್ದಳೆಯಲ್ಲಿ ದಯಾನಂದ ಮಿಜಾರು ಹಾಗೂ ಚಕ್ರತಾಳ ಕಾರ್ತಿಕ್ ಚಿತ್ರಾಪುರ ಸಹಕರಿಸಿದ್ದಾರೆ. ವಿದ್ಯಾರ್ಥಿ ತಂಡಕ್ಕೆ ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ನಿರ್ದೇಶನ ಹಾಗೂ ದೀವಿತ್ ಕೋಟ್ಯಾನ್, ಶರತ್ ಪೂಜಾರಿ ಸಹ ನಿರ್ದೇಶನ ನೀಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಹಾಗೂ ವಿದ್ಯಾರ್ಥಿಗಳನ್ನು ಸಂಘಟಕರ ವತಿಯಿಂದ ಗೌರವಿಸಲಾಯಿತು.







