ಜಿಂದಾಲ್ ವಿದೇಶ ಪ್ರವಾಸಕ್ಕೆ ಕೋರ್ಟ್ ಸಮ್ಮತಿ

ಹೊಸದಿಲ್ಲಿ, ನ.9: ಕಲ್ಲಿದ್ದಲು ನಿಕ್ಷೇಪ ವಿತರಣೆ ಹಗರಣದ ಆರೋಪಿಯಾದ ಕಾಂಗ್ರೆಸ್ ನಾಯಕ ಹಾಗೂ ಕೈಗಾರಿಕಾ ಉದ್ಯಮಿ ನವೀನ್ ಜಿಂದಾಲ್ ಅವರಿಗೆ ಔದ್ಯಮಿಕ ಉದ್ದೇಶಗಳಿಗಾಗಿ ವಿದೇಶಕ್ಕೆ ಪ್ರಯಾಣಿಸಲು ವಿಶೇಷ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.
ಜನವರಿ 16ರಿಂದ 23ರವರೆಗೆ ಬ್ರಿಟನ್ ಹಾಗೂ ಸ್ವಿಝರ್‌ಲ್ಯಾಂಡ್‌ಗೆ ಭೇಟಿ ನೀಡಲು ಅನುಮತಿ ಕೋರಿ ಜಿಂದಾಲ್ ಸಲ್ಲಿಸಿದ ಮನವಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ಪುರಸ್ಕರಿಸಿದರು. ಆದರೆ ಭಾರತಕ್ಕೆ ಹಿಂತಿರುಗಿದ ಏಳು ದಿನಗಳೊಳಗೆ ಅವರು ತಾನು ಸಂದರ್ಶಿಸಿದ ಸ್ಥಳಗಳ ಬಗ್ಗೆ ವಿವರಗಳನ್ನು ನೀಡುವಂತೆಯೂ ನ್ಯಾಯಾಲಯ ಸೂಚಿಸಿತು.ಇದೇ ಸಂದರ್ಭದಲ್ಲಿ ಪುರಾವೆಗಳನ್ನು ನಾಶಪಡಿಸದಂತೆ ಇಲ್ವಲೇ ಸಾಕ್ಷಿಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಂತೆಯೂ ನ್ಯಾಯಾಲಯ ಶರತ್ತುಗಳನ್ನು ವಿಧಿಸಿದೆ.
Next Story





