ಪೆಟ್ರೋಲ್ ಬಂಕ್‌ನಲ್ಲಿ ನಗದು ಕಳವು
ಹೆಬ್ರಿ, ಜ.9: ಚಿಲ್ಲರೆ ಕೇಳುವ ನೆಪದಲ್ಲಿ ಸೋಮೇಶ್ವರದ ಪೆಟ್ರೋಲ್ ಬಂಕ್‌ನ ಕಚೇರಿಗೆ ಬಂದ ಇಬ್ಬರು ಸಾವಿರಾರು ರೂ. ನಗದು ಕಳವು ಮಾಡಿ ರುವ ಘಟನೆ ಜ.8ರಂದು ಸಂಜೆ 5.0ರ ಸುಮಾರಿಗೆ ನಡೆದಿದೆ.
ಸೋಮೇಶ್ವರದ ಸಂಜೀವ ಅಮಿನ್ ಪೆಟ್ರೋಲ್ ಬಂಕ್‌ನ ಕಚೇರಿಗೆ ಬಂದ ಅಪರಿಚಿತ ಗಂಡಸು ಹಾಗೂ ಬುರ್ಖಾ ಧರಿಸಿದ್ದ ಮಹಿಳೆ ಕ್ಯಾಶಿ ಯರ್ ಸಂಗೀತ ಅವರನ್ನು ಚಿಲ್ಲರೆ ಕೇಳುವ ನೆಪದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಸಿ ಅವರ ಗಮನವನ್ನು ಬೇರೆ ಕಡೆ ಸೆಳೆದು ಅವರ ಅರಿವಿಗೆ ಬಾರದಂತೆ ಡ್ರಾವರಂಗೆ ಕೈ ಹಾಕಿ ಅಲ್ಲಿದ್ದ 1,86,000ರೂ.ನಲ್ಲಿ 74,072 ರೂ. ಹಣವನ್ನು ಕಳವು ಮಾಡಿ ಹೋಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





