ರಸ್ತೆ ಕಾಮಗಾರಿಗೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

ಸಕಲೇಶಪುರ, ಜ.9 : ಪಟ್ಟಣದ 7 ಮತ್ತು 8ನೇ ವಾರ್ಡ್ ರಸ್ತೆ ದುರಸ್ತಿ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
7ನೇ ವಾರ್ಡ್‌ನಲ್ಲಿ ಹದಗೆಟ್ಟಿರುವ ರಸ್ತೆ ಪಕ್ಕದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶೀಘ್ರವಾಗಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಪುರಸಭೆ ದುರುದ್ದೇಶದಿಂದ ರಸ್ತೆ ದುರಸ್ಥಿ ಮಾಡುತ್ತಿಲ್ಲ . ಜೊತೆಗೆ ಈ ವಾರ್ಡ್‌ಗಳಿಂದ ಗೆದ್ದಿರುವ ಪುರಸಭೆ ಸದಸ್ಯರುಗಳಾದ ಕಾಳಿಂಗಪ್ಪ ಮತ್ತು ಶೋಭ ಅಸಮರ್ಥರಾಗಿದ್ದಾರೆ. ಇವರಿಂದ ವಾರ್ಡ್ ಅಭಿವೃದ್ಧಿ ಅಸಾಧ್ಯವಾಗಿದ್ದು ಇವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಒಂದು ವಾರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಾಧಿಕಾರಿ ಮಂಜುನಾಥ್ ಅತಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರುಗಳಾದ ಮಹಿದ್ದೀನ್ ಶರೀಫ್, ಸಿದ್ದೀಕ್, ಹನೀಫ್, ಜುಬೇರ್, ಇರ್ಫಾನ್, ಮೂಸ ಮುಂತಾದವರು ಉಪಸ್ಥಿತರಿದ್ದರು.





