ಬೈಕ್‌ಗೆ ಟ್ರಾಕ್ಟರ್ ಢಿಕ್ಕಿ: ಮೂರು ಮಂದಿ ಸಾವು
ಹೊನ್ನಾಳಿ, ಜ.9: ರಸ್ತೆ ಬದಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದ ವೇಳೆ ಟ್ರಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ತಾಲೂಕಿನ ಬೆನಕನಹಳ್ಳಿ ಗ್ರಾಮದ ಮೃತ ಸುರೇಶ್(39) ಎಂಬವರ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವ ಉದ್ದೇಶದಿಂದ ಹಿರೇಕರೂರು ತಾಲೂಕಿನ ಕಮಲಾಪುರ ಗ್ರಾಮದಿಂದ ಬಂದಿದ್ದ ಪರಮೇಶ್ವರಪ್ಪ, ಕರಿಯಪ್ಪ ಮೃತಪಟ್ಟಿದ್ದಾರೆ.
ಈ ಮೂವರು ಜನರು ಬೋರ್ ಪಾಯಿಂಟ್ ಮಾಡಿಸಲು ಹೋಗಿದ್ದರು ಎನ್ನಲಾಗಿದೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





