ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

ಮುಂಡಗೋಡ, ಜ.9: ಮನೆಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾದ ಘಟನೆ ಪಟ್ಟಣದ ನೆಹರೂ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ
ಸುಂದರಾಬಾಯಿ ಶೇಟ್ ಎಂಬವರ ಮನೆಯಲ್ಲಿ ಬಾಡಿಗೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಏಜಂಟ್ ಅಶೋಕ್ ಮೈಸೂರ್ ಎಂಬವರ ಮನೆಯೆ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ಬೆಳಗ್ಗೆ ನೀರು ಕಾಯಿಸಲು ಒಲೆ ಹಚ್ಚಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಕಿ ಪ್ರಖರತೆಯಿಂದ ಮನೆಯಲ್ಲಿಯ ಎಲ್ಲ ಸಾಮಾನುಗಳು ಸುಟ್ಟು ಕರಕಲಾಗಿವೆ. ಮನೆಗೆ ಬೆಂಕಿ ತಗಲಿದಾಗ ಮನೆಯಲ್ಲಿದ್ದ ವೀಣಾ ಮೈಸೂರ್ ಅವರ ಕೈ ಸುಟ್ಟಿದೆ ಎಂದು ಹೇಳಲಾಗಿದೆ.
ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದ ವೀಣಾ ಮೈಸೂರ, ವ್ಯಾಪಾರಕ್ಕೆ ತಂದಿಟ್ಟ ಸೀರೆಗಳು ಬೆಂಕಿಗೆ ಆಹುತಿಯಾಗಿ ಅಪಾರ ಹಾನಿಯಾಗಿದೆ ಎಂದು ಹೇಳಲಾಗಿದೆ.
ಮುಂಡಗೋಡ ಅಗ್ನಿಶಾಮಕದಳ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಪಕ್ಕದ ಮನೆಗಳಿಗೆ ಬೆಂಕಿ ತಾಗುವುದನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಪಂ ಅಧ್ಯಕ್ಷ ರಫೀಕ್ ಇನಾಮದಾರ, ಪಪಂ ಸದಸ್ಯ ಸಂಜು ಪಿಶೆ ಮುಂತಾದವರು ಭೇಟಿ ನೀಡಿದರು
Next Story





