ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ ಒಳಗೆ ನುಗ್ಗಿದ ಬಸ್
ಸಾಗರ, ಜ.9: ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಖಾಸಗಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಒಳಗೆ ನುಗ್ಗಿದ ಘಟನೆ ಸೋಮವಾರ ನಡೆದಿದೆ.
ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನ್ನು ಚಾಲಕ ಬಸ್ ನಿಲ್ದಾಣಕ್ಕೆ ತರಲು ಸ್ಟಾರ್ಟ್ ಮಾಡಿದಾಗ ಬ್ರೇಕ್‌ಫೇಲ್ ಆಗಿ ಹಿಂಭಾಗದಲ್ಲಿದ್ದ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ನಂತರ ಬಸ್ ಮನೆಯ ಗೇಟ್‌ಗೆ ಢಿಕ್ಕಿ ಹೊಡೆದು, ಕಾಂಪೌಂಡ್ ಒಳಗೆ ನುಗ್ಗಿದೆ. ಇದರಿಂದ ಕಾಂಪೌಂಡ್ ಹಾಗೂ ಗೇಟಿನ ಜೊತೆಗೆ ಬಸ್‌ನ ಮುಂಭಾಗದಲ್ಲಿ ನಜ್ಜುಗುಜ್ಜಾಗಿದೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಬಸ್ ಡ್ರೈವರ್‌ಗೆ ಥಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತ ಸಂದರ್ಭದಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ.
Next Story





