ಎಂ.ದೇವದಾಸ್ ಮಲ್ಯ
ತೀರ್ಥಹಳ್ಳಿ, ಜ.9: ಪಟ್ಟಣದ ಹೆಸರಾಂತ ಎಂ. ದೇವದಾಸ್ ಮಲ್ಯ ಜವಳಿ ಅಂಗಡಿಯ ಸಂಸ್ಥಾಪಕ ಎಂ.ದೇವದಾಸ್ ಮಲ್ಯ(90) ಪಟ್ಟಣದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ತಾಲೂಕಿನ ಹಿರಿಯ ವರ್ತಕರಾಗಿದ್ದ ಇವರು ಸಮಾಜ ಸೇವೆಯಲ್ಲಿ ತೊಡಗಿದ್ದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.