‘ಪಚ್ಚೆ ಹಾದಿ’ ಕೃತಿ ಬಿಡುಗಡೆ

ಮಂಗಳೂರು,ಜ.9: ನಮ್ಮ ಸಂಸ್ಕೃತಿ, ಜನಜೀವನ, ಪ್ರಕೃತಿ ಎಲ್ಲವು ಕೂಡಾ ಉಲ್ಲಾಸ ನೀಡುವಂಥದ್ದು. ಚಾರಣವು ಸಾಹಸಕ್ಕೆ ತೊಡಗಲು ಪ್ರೇರೇಪಿಸುವ ಜೊತೆಗೆ ಮನಸ್ಸಿಗೆ ಖುಷಿ ನೀಡುವ ಯಾನ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಸೋಮವಾರ ನಗರದ ಪುರಭವನ ಮುಂಭಾಗದ ಗಾಂಧಿ ಪಾರ್ಕ್‌ನಲ್ಲಿ ಪತ್ರಕರ್ತ ಶಶಿಧರ ಬೆಳ್ಳಾಯರು ಬರೆದಿರುವ ‘ಪಚ್ಚೆ ಹಾದಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡಕಟ್ಟೆ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಯಕಿರಣ ಫಿಲ್ಮ್‌ನ ಮಾಲಕ ಪ್ರಕಾಶ್ ಪಾಂಡೇಶ್ವರ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮಾಕರ ಭಟ್, ವಿಜಯ ರಾವ್, ಹೊಸಸಂಜೆ ಪ್ರಕಾಶನದ ಆರ್.ದೇವರಾಯ ಪ್ರಭು, ಲೇಖಕ ಶಶಿಧರ ಬೆಳ್ಳಾಯರು ಉಪಸ್ಥಿತರಿದ್ದರು.
ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
Next Story





