ಕಾಸರಗೋಡು : ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ

ಕಾಸರಗೋಡು , ಜ.9 : ಸಾರಿಗೆ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಸೋಮವಾರ ಚಾಲನೆ ನೀಡಲಾಯಿತು .
ನಗರಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು.
ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಕೆ . ಜೀವನ್ ಬಾಬು, ಸಾರಿಗೆ ಅಧಿಕಾರಿ ಕೆ . ಬಾಲಕೃಷ್ಣನ್ , ಡಿ ವೈ ಎಸ್ ಪಿ ಹರಿಶ್ಚ೦ದ್ರ ನಾಯಕ್ , ಜಯಪ್ರಕಾಶ್ , ವಿನಯ್, ಕುಞ೦ಬು ನಾಯರ್ , ವಿ . ಜೆ ಕೃಷ್ಣ ಕುಮಾರ್ ಮೊದಲಾದವರು ಮಾತನಾಡಿದರು .
ಕೆ . ಆರ್ ಪ್ರಸಾದ್ ತರಗತಿ ನಡೆಸಿಕೊಟ್ಟರು.
ಎ. ಕೆ ರಾಜೀವನ್ ಸ್ವಾಗತಿಸಿದರು.
Next Story





