ಕಾರು ಢಿಕ್ಕಿ: ವ್ಯಕ್ತಿ ಮೃತ್ಯು
ಮಂಗಳೂರು, ಜ.9: ನಗರದ ಬೊಂದೇಲ್ ಜಂಕ್ಷನ್ ಬಳಿ ಸೋಮವಾರ ಮುಂಜಾನೆ 5:30ಕ್ಕೆ ಇನೋವಾ ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ರೋನಾಲ್ಡ್ ನೊರೊನ್ಹಾ(56) ಎಂಬವರು ಮೃತಪಟ್ಟಿದ್ದಾರೆ.
ಕ್ರಿಸ್‌ಮಸ್ ಆಚರಿಸಲು ಮಸ್ಕತ್‌ನಿಂದ ಊರಿಗೆ ಬಂದಿದ್ದ ಇವರು ಮುಂಜಾನೆ ವಾಕಿಂಗ್ ಹೋಗುತ್ತಿದ್ದಾಗ ಮಂಗಳೂರನಿಂದ ಕಾವೂರಿಗೆ ಹೋಗುತ್ತಿದ್ದ ಇನೋವಾ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನೊರೊನ್ಹಾರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





