ಬೈಕ್ ಕಳವು ಪ್ರಕರಣ: ಓರ್ವನ ಬಂಧನ
.gif)
ಮಂಜೇಶ್ವರ, ಜ.10: ಬುಲೆಟ್ ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಆಲಂಪಾಡಿ ನಿವಾಸಿ ಮುಹಮ್ಮದ್ ಅಕ್ಬರ್(25)ಬಂಧಿತ ಆರೋಪಿ. ವಾಮಂಜೂರು ಚೆಕ್‌ಪೋಸ್ಟ್ ಡಿಕ್ಲರೇಶನ್ ನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬೋವಿಕ್ಕಾನ ನಿವಾಸಿಯೊಬ್ಬರು ತಾನು ವಾಸಿಸುವ ಫ್ಲಾಟ್ ನ ಅಂಗಣದಲ್ಲಿ ನಿಲ್ಲಿಸಿದ್ದ ಹೊಸ ಬುಲೆಟ್ ಬೈಕ್ ಹೊಸ ವರ್ಷಾರಂಭದಂದು ಕಳವಾಗಿತ್ತು. ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಜೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರಲ್ಲಿ ಇನ್ನಿಬ್ಬರು ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story





