ಉತ್ತರಪ್ರದೇಶದಲ್ಲಿ ಮಾಯಾವತಿಯೊಂದಿಗೆ ಮೈತ್ರಿಗೆ ಸಿದ್ಧವಾದ ಕಾಂಗ್ರೆಸ್ !

ಹೊಸದಿಲ್ಲಿ,ಜ.10: ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿಯ ಬಗೆಗಿನ ಗುಟ್ಟು ಇನ್ನೂ ರಟ್ಟಾಗಿಲ್ಲ. ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಮುಲಾಯಂ ಸಿಂಗ್ ಯಾದವ್ ವಿರೋಧಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಬಯಸುತ್ತಿದ್ದಾರೆ. ಒಂದು ವೇಳೆ ಮೈತ್ರಿ ಮಾಡಿಕೊಂಡರೆ ಮುನ್ನೂರು ಸೀಟು ಗೆಲ್ಲಬಹುದೆಂದು ಈಗಾಗಲೇ ಅವರು ಘೋಷಿಸಿಬಿಟ್ಟಿದ್ದಾರೆ. ಇವೆಲ್ಲದ್ದರ ನಡುವೆ ಕಾಂಗ್ರೆಸ್, ಬಿಎಸ್ಪಿಯೊಂದಿಗೂ ಚುನಾವಣಾ ಮೈತ್ರಿಗೆ ಸಿದ್ಧವಾಗಿ ನಿಂತ ಹೊಸ ಬೆಳವಣಿಗೆಗಳು ಉತ್ತರ ಪ್ರದೇಶದಿಂದ ವರದಿಯಾಗಿದೆ. ಮಾಯಾವತಿ-ಪ್ರಿಯಾಂಕಾರ ನಡುವೆ ಚರ್ಚೆ:
ಬಿಎಸ್ಪಿ-ಕಾಂಗ್ರೆಸ್ ಮೈತ್ರಿ ಕುರಿತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಈಗಾಗಲೇ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಮುಂದೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಗಾಂಧಿ ಕುಟುಂಬ ಸದಸ್ಯೆ ಪ್ರಿಯಾಂಕಾರ ಜೊತೆ ಮುಂದಿನ ಮಾತುಕತೆ ನಡೆಯಲಿದೆ. ಬಿಎಸ್ಪಿ ಜೊತೆಗಿನ ಮೈತ್ರಿ ಸಾಧ್ಯತೆಯನ್ನು ಪ್ರಿಯಾಂಕಾ ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಮೈತ್ರಿ ರಾಜಕೀಯದಿಂದ ಉತ್ತರಪ್ರದೇಶದಲ್ಲಿ ಬಿಜೆಪಿ ಕಠಿಣ ಸವಾಲು:
ಕಾಂಗ್ರೆಸ್‌ಗೆ ಅಧಿಕಾರಕ್ಕೆ ಮರಳಲು ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಧಿಕಾರಕ್ಕೆ ಮರಳಲು ಬಿಎಸ್ಪಿ ಮತ್ತು ಸಮಾಜವಾದಿಗೂ ಮೈತ್ರಿ ಅನಿವಾರ್ಯವೇ. ಬಿಜೆಪಿಗೆ ಕಠಿಣ ಸ್ಪರ್ಧೆಯೊಡ್ಡಲು ಅವುಗಳು ಮೈತ್ರಿ ರಾಜಕಾರಣಕ್ಕೆ ಅವುಗಳು ಸಿದ್ಧವಾಗಿ ನಿಂತಿವೆ. ಈನಡುವೆ ಕಾಂಗ್ರೆಸ್ ಮೈತ್ರಿ ಸಾಧ್ಯತೆಯನ್ನು ಸಮಾಜವಾದಿ ಪಕ್ಷ ಮತ್ತು ಬಹುಜನಸಮಾಜವಾದಿ ಪಕ್ಷಗಳೆರಡಲ್ಲಿ ಮೈತ್ರಿ ಸಾಧ್ಯತೆಯನ್ನು ಒರೆ ಹಚ್ಚಿ ನೋಡುತ್ತಿದೆ . ಸಮಾಜವಾದಿ ಕುಟುಂಬದೊಳಗಿನ ಪ್ರತಿಷ್ಠೆಯ ಕದನ ಮೈತ್ರಿ ಸಾಧ್ಯತೆಯನ್ನು ಇನ್ನಷ್ಟು ಉಜ್ವಲಗೊಳಿಸಿದ್ದು ಸ್ಪಷ್ಟವಾಗಿದೆ. ಅಖಿಲೇಶ್ ಮೈತ್ರಿ ಸಾಧ್ಯತೆಗಳನ್ನು ಚರ್ಚಿಸಲು ಮುಂದಿನವಾರ ಅಖಿಲೇಶ್ ರಾಹುಲ್‌ಗಾಂಧಿಯನ್ನು ಭೇಟಿಯಾಗಬಹುದು. ಅವರು ಈಗಾಗಲೇ ಹಲವು ಸಲ ಕಾಂಗ್ರೆಸ್ ಜೊತೆಗಿನ ಮೈತ್ರಿ ಪ್ರಸ್ತಾಪ ಇಟ್ಟಿದ್ದಾರೆ.
ಇನ್ನೊಂದು ಕಡೆ ಬಿಎಸ್ಪಿ , ಕಾಂಗ್ರೆಸ್‌ಗಳ ಮೈತ್ರಿ ಕುರಿತು ಚರ್ಚೆಮುಂದುವರಿದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಬಿಎಸ್ಪಿಗೆ ಸಮಾಜವಾದಿ ಪಾರ್ಟಿಯೊಂದಿಗಿನ ಮೈತ್ರಿಯ ಹಳೆಯ ಕಹಿ ಅನುಭವ ಕಾಂಗ್ರೆಸ್‌ನತ್ತ ವಾಲಲು ಪ್ರೇರಣೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಅದಕ್ಕೆ ಸರಿಯಾದ ಮಿತ್ರ ಕಾಂಗ್ರೆಸ್ ಮಾತ್ರ ಆಗಬಹುದು
ರಾಹುಲ್, ಪ್ರಿಯಾಂಕರನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ:
ಸಮಾಜವಾದಿ ಪಾರ್ಟಿಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಡ್ರೈವಿಂಗ್ ಸೀಟ್‌ಗೆ ಬಂದ್ದಿದ್ದು, ಕಾಂಗ್ರೆಸ್- ಸಮಾಜವಾದಿ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯನ್ನು ಸುಲಭವಾಗಿಸಿದೆ. ರಾಹುಲ್‌ಹಾಗೂ ಪ್ರಿಯಾಂಕಾರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.







