ನರೇಂದ್ರ ಮೋದಿಗೆ ಕಾಂಗ್ರೆಸ್‌ಗೆ ಬರಲು ಆಹ್ವಾನ ನೀಡಿದ ಜೈ ರಾಂ ರಮೇಶ್ !
ವೈರಲ್ ವೀಡಿಯೊ

ಹೊಸದಿಲ್ಲಿ,ಜ.10: ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರಮೋದಿಗೆ ಸಂಬಂಧಿಸಿದ ಹಳೆಯ ವೀಡಿಯೊ ತೀವ್ರಗತಿಯಲ್ಲಿ ವೈರಲ್‌ಆಗುತ್ತಿದೆ. 1988ರಲ್ಲಿ ಮೋದಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ನೇಮಕವಾಗಿದ್ದರು. ಟಿವಿ ಚ್ಯಾನೆಲ್ ಚರ್ಚೆಯಲ್ಲಿ ಮೋದಿ ಮತ್ತು ಕಾಂಗ್ರೆಸ್‌ನ ಜಯರಾಂ ರಮೇಶ್ ಭಾಗವಹಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರಕಾರವನ್ನು ಕಾಂಗ್ರೆಸ್ ಬೀಳಿಸಬಾರದಿತ್ತು ಎಂದು ಜಯರಾಂ ರಮೇಶ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ," ಮೂರನೆ ರಂಗವನ್ನು ವಿಫಲಗೊಳಿಸುವುದು ಕಾಂಗ್ರೆಸ್ ಮುಂದಿದ್ದ ತಾತ್ಕಾಲಿಕ ಉದ್ದೇಶವಾಗಿತ್ತು. ಮೂರನೆ ರಂಗದವಶವಾಗಿದ್ದ ಕಾಂಗ್ರೆಸ್‌ನ ವೋಟುಗಳನ್ನು ಮರಳಿ ಗಳಿಸುವವರೆಗೆ ಅದು ನಮ್ಮ ಕಡೆ(ಬಿಜೆಪಿ) ತಿರುಗುವುದಿಲ್ಲ " ಎಂದು ಹೇಳಿದ್ದರು. ಮೋದಿಯ ಉತ್ತರದಿಂದ ಜಯರಾಂ ರಮೇಶ್ ಬಹಳ ಗಂಭೀರವಾಗಿ " ಮೋದಿಯವರೇ, ಒಂದು ವೇಳೆ ನೀವು ಬಿಜೆಪಿ ತೊರೆಯುವುದಿದ್ದರೆ, ನಿಮಗೆ ಕಾಂಗ್ರೆಸ್‌ನಲ್ಲಿ ವೇಕೆನ್ಸಿ (ಅವಕಾಶ) ಇದೆ" ಎಂದು ಹೇಳಿದ್ದರು. ಮೋದಿ ನಗುತ್ತಾ "ನಿಮಗೆ ತುಂಬಾ ಕಷ್ಟ ಆದೀತು. ನಾನು ಸಂಘಪರಿವಾರದ ವ್ಯಕ್ತಿ. ಈ ರೀತಿ ನೀವು ಆಹ್ವಾನ ನೀಡಿದರೆ ನಿಮ್ಮವರಿಗೆ ಉತ್ತರ ಕೊಡಬೇಕಾದೀತು" ಎಂದು ಹೇಳಿದ್ದರು. ಈ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆಂದು ವರದಿಯಾಗಿದೆ.





