ಕೈಕಂಬ ಬೆಂಕಿ ಆಕಸ್ಮಿಕದಿಂದ ಅಂಗಡಿಗೆ ಹಾನಿ

ಬಂಟ್ವಾಳ, ಜ.10: ಬಿ.ಸಿ.ರೋಡಿನ ಕೈಕಂಬದಲ್ಲಿ ಬೋಜ ಸಾಲ್ಯಾನ್ ಎಂಬವರ ಅಂಗಡಿಗೆ ಸೋಮವಾರ ರಾತ್ರಿ ಬೆಂಕಿ ತಗಲಿ ಹಣ್ಣು ಹಂಪಲು, ತರಕಾರಿ ಸಹಿತ ಸಾವಿರಾರು ರೂಪಾಯಿ ವೌಲ್ಯದ ಸೊತ್ತುಗಳು ನಾಶವಾಗಿವೆ.
ಮಾಹಿತಿ ತಿಳಿದ ಕೂಡಲೇ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ರಾಜೇಶ್ ಶೆಟ್ಟಿ, ಜಯ, ಲೋಕೇಶ್ ಭಂಡಾರಿ, ಪ್ರಸಾದ್, ವಿಜಯ ಕುಮಾರ್, ಕಂದಾಯ ಇಲಾಖೆ ಕಚೇರಿ ಸಿಬ್ಬಂದಿ ಸದಾಶಿವ ಕೈಕಂಬ, ಲಕ್ಷ್ಮಣ ನರಿಕೊಂಬು ಹಾಗೂ ಕೇಶವ ದೈಪಲ ಮೊದಲಾದವರು ಸ್ಥಳಕ್ಕಾಗಮಿಸಿ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದರು.
Next Story





