ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನೇರ ಸೆಟ್ ಗಳದ್ದೇ ಗೆಲುವು
ಬೆಳ್ತಂಗಡಿ, ಜ.10 : ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಲೀಗ್ ಹಂತದಲ್ಲಿ ಬಲಿಷ್ಠ ತಂಡಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಹರಿಯಾನ, ಹಿಮಾಚಲಪ್ರದೇಶ ಹಾಗೂ ಮಹಾರಾಷ್ಟ್ರ ತಂಡಗಳು ತಮ್ಮ ಪಂದ್ಯಗಳನ್ನು ಗೆದ್ದುಕೊಂಡಿದೆ.
ಫಲಿತಾಂಶದ ವಿವರ ಈ ಕೆಳಗಿನಂತಿದೆ :
ಹಿಮಾಚಲಪ್ರದೇಶ ತಂಡ ಛತ್ತೀಸ್‌ಗಡ ತಂಡವನ್ನು ( 25-16,25-14,25-6) ಗಳ ನೇರ ಸೆಟ್‌ಗಳಿಂದ ಸೋಲಿಸಿದೆ.
ಕೇರಳ ಕೇಂದ್ರೀಯ ವಿದ್ಯಾಲಯ ಸಮಿತಿ ತಂಡವನ್ನು ( 25-14,25-13,25-4) ನೇರ ಸೆಟ್‌ಗಳಲ್ಲಿ ಸೋಲಿಸಿದೆ.
ಕರ್ನಾಟಕ ತೆಲಂಗಾಣ ತಂಡವನ್ನು ( 25-11,26-24,25-10) ಗಳ ನೇರ ಸೆಟ್‌ಗಳಲ್ಲಿ ಸೋಲಿಸಿದೆ . ಹರಿಯಾಣ ಒಡಿಸ್ಸಾ ತಂಡವನ್ನು (25-16,25-12,15-0) ನೇರ ಸೆಟ್‌ಗಳಲ್ಲಿ ಸೋಲಿಸಿದರೆ, ಮಹಾರಾಷ್ಟ್ರ ಉತ್ತರಾಖಂಡ ತಂಡ ವಿರುದ್ದ ( 25-9,25-10,25-7) ನೇರ ಸೆಟ್‌ಗಳಲ್ಲಿ ಗೆಲುವನ್ನು ಪಡೆದಿದೆ.
ತಮಿಳುನಾಡು ತಂಡ ನವೋದಯ ವಿದ್ಯಾಲಯಗಳ ತಂಡದ ವಿರುದ್ದ ( 25_12,25-9,25-7) ನೇರ ಸೆಟ್ ಗಳ ಗೆಲುವನ್ನು ಕಂಡಿದೆ.
ರಾಜಾಸ್ತಾನ ತಂಡ ಸಿಬಿಎಸ್‌ಇ ತಂಡದ ವಿರುದ್ದ (25-10, 25-9,25-7) ನೇರ ಸೆಟ್‌ಗಳಲ್ಲಿ ಗೆಲುವನ್ನು ಕಂಡಿದೆ.
ಪಶ್ಚಿಮ ಬಂಗಾಳ ತಂಡ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ದ (25-4,25-9,25-7) ನೇರ ಸೆಟ್‌ಗಳಲ್ಲಿ ಗೆಲುವನ್ನು ಕಂಡಿದೆ .
ಉತ್ತರಪ್ರದೇಶ ತಂಡ ಐಪಿಎಸ್‌ಸಿ ತಂಡದ ವಿರುದ್ದ (25-12,25 17,25-8) ನೇರ ಸೆಟ್‌ಗಳಲ್ಲಿ ಗೆಲುವನ್ನು ಕಂಡಿದೆ. ತೀವ್ರ ಸ್ಪರ್ಧೆ ನಡೆದ ಮದ್ಯಪ್ರದೇಶ ಮತ್ತು ಒಡಿಸ್ಸಾ ತಂಡಗಳ ನಡುವಿನ ಪಂದ್ಯದಲ್ಲಿ ಒಡಿಸ್ಸಾ ತಂಡ 3-1 ಸೆಟ್‌ಗಳಲ್ಲಿ ( 25-17, 25-23,20-25,25-13) ಗೆಲುವನ್ನು ತನ್ನದಾಗಿಸಿಕೊಂಡಿದೆ.
ಮಹಾರಾಷ್ಟ್ರ ಛತ್ತೀಸ್ ಗಡ ತಂಡವನ್ನು (25-21,25-13, 25-8) ನೇರ ಸೆಟ್‌ಗಳಲ್ಲಿ ಸೋಲಿಸಿದರೆ , ಹಿಮಾಚಲ ಪ್ರದೇಶ ಉತ್ತರಾಖಂಡ ತಂಡವನ್ನು (25-5,25-8,25-8) ನೇರ ಸೆಟ್‌ಗಳಲ್ಲಿ ಸೋಲಿಸಿದೆ .
ಪ್ರಾಥಮಿಕ ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದು 27 ತಂಡಗಳನ್ನು ಎಂಟು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತಿ ಗುಂಪಿನ ಅಗ್ರಸ್ಥಾನಿ ತಂಡ ಕ್ವಾರ್ಟರ್‌ಫೈನಲ್ ಆಡಲು ಅರ್ಹತೆ ಪಡೆಯಲಿದೆ.







