ಜಾಕಿ ಶ್ರಾಫ್, ಅರ್ಜುನ್ ರಾಮ್ ಪಾಲ್ ಬಿಜೆಪಿಗೆ

ಮುಂಬೈ, ಜ. 10 : ಬಾಲಿವುಡ್ ನಟರಾದ ಜಾಕಿ ಶ್ರಾಫ್ ಹಾಗು ಅರ್ಜುನ್ ರಾಮ್ ಪಾಲ್ ಮಂಗಳವಾರ ಬಿಜೆಪಿ ಸೇರಲಿದ್ದಾರೆ. ಇವರಿಬ್ಬರೂ ಪಕ್ಷದ ಪರವಾಗಿ ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
" ನಾನು ರಾಜಕಾರಣಿಯಲ್ಲ. ನಾನು ಅವರನ್ನು (ಬಿಜೆಪಿ) ಬೆಂಬಲಿಸಲು ಇಲ್ಲಿದ್ದೇನೆ " ಎಂದು ಅರ್ಜುನ್ ಹೇಳಿದ್ದಾರೆ. ದಿಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇವರಿಬ್ಬರೂ ಬಿಜೆಪಿ ಸೇರಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಅವರು ಇವರಿಬ್ಬರನ್ನೂ ಭೇಟಿಯಾಗಲಿದ್ದಾರೆ. ಫೆಬ್ರವರಿ 11 ರಿಂದ 7 ಹಂತಗಳ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ.
Next Story





