ಕಾಸರಗೋಡು :ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ . ಜೆ ಸಿಮೋನ್

ಕಾಸರಗೋಡು , ಜ.10 : ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸಿ . ಜೆ ಸಿಮೋನ್ ಅಧಿಕಾರ ವಹಿಸಿಕೊಂಡಿದ್ದಾರೆ.
ನಿರ್ಗಮಿತ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್ ರವರನ್ನು ವರ್ಗಾಹಿಸಿ ಸಿಮೋನ್ ರವರನ್ನು ಇತ್ತೀಚೆಗೆ ನಿಯುಕ್ತಿಗೊಳಿಸಲಾಗಿತ್ತು .
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಥೋಮ್ಸನ್ ಜೋಸ್ ರವರು ಸಿಮೋನ್ ರವರಿಗೆ ಅಧಿಕಾರ ಹಸ್ತಾ೦ತರಿಸಿದರು.
ಪರಿಚಯ:
ತೊಡುಪುಳ ನಿವಾಸಿಯಾಗಿರುವ ಸಿಮೋನ್ ಈ ಹಿಂದೆ ಕೊಟ್ಟಾಯಂ ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೆಚ್ಚುವರಿ ಹೊಣೆ ವಹಿಸಿದ್ದರು. ಬಳಿಕ ತ್ರಿಶ್ಯೂರು ಸಿಟಿ ಪೊಲೀಸ್ ಆಯುಕ್ತರಾಗಿ , ಎರ್ನಾಕುಲಂ ಅಪರಾಧ ಪತ್ತೆದಳದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
2013ರಲ್ಲಿ ಉತ್ತಮ ಸೇವೆಗಿರುವ ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೂ ಅರ್ಹರಾಗಿದ್ದಾರೆ.
ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಥೋಮ್ಸನ್ ಜೋಸ್ ರವರನ್ನು ವರ್ಗಾಹಿಸಿದ್ದರೂ ಬದಲಿ ಸ್ಥಾನ ನೀಡಿಲ್ಲ.
Next Story





