ಮಾ.5ರಂದು ಪೊಯ್ಯತ್ತಬೈಲ್ ಉರೂಸ್ ಕಾರ್ಯಕ್ರಮ
ಮಂಗಳೂರು, ಜ.10: ಪೊಯ್ಯತ್ತಬೈಲ್ ಅಸ್ಸಯ್ಯಿದತ್ ಮಣವಾಟಿ ಬೀವಿಯ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಮಾ.5ರಂದು ಜರಗಲಿದೆ. ಆ ಪ್ರಯುಕ್ತ ಫೆ.17ರಿಂದ ಮಾ.4ರವರೆಗೆ ಮತಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಯವಾದಿ ಮುಹಮ್ಮದ್ ಅಸ್ಗರ್ ಮುಡಿಪು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17ರಂದು ಜುಮಾ ನಮಾಝ್ ಬಳಿಕ ಖಾಝಿ ಶೈಖುನಾ ಎಂ. ಆಲಿಕುಂಞಿ ಉಸ್ತಾದ್ ನೇತೃತ್ವದಲ್ಲಿ ಅಸೈಯದ್ ಅಥಾವುಲ್ಲಾ ತಂಙಳ್ ಉದ್ಯಾವರ ಅವರಿಂದ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಅಸೈಯದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ಕಡಲುಂಡಿ, ಅಸೈಯದ್ ಫಝಲ್ ಕೊಯಮ್ಮ ತಂಙಳ್ ಕೂರ, ಅಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಬಾಯಾರ್, ಅಸೈಯದ್ ಶಿಹಾಬುದ್ದೀನ್ ಸಖಾಫಿ ಅಲ್ ಹೈದ್ರೋಸಿ ಕಿಲ್ಲೂರ್ ತಂಙಳ್, ಅಸೈಯದ್ ಅಬ್ದುರ್ರಹ್ಮಾನ್ ತಾಹೀರ್ ಅಲ್ ಬುಖಾರಿ ತಂಙಳ್ ಕಡಲುಂಡಿ, ಅಸೈಯದ್‌ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರ್, ಅಸೈಯದ್ ಝೈನುಲ್ ಅಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗಯಿ, ಅಸೈಯದ್ ಅಲಿ ತಂಙಳ್ ಕುಂಬೊಲ್, ಅಸೈಯದ್ ಸುಹೈಲ್ ಅಸ್ಸಖಾಫ್ ತಂಙಳ್ ಮಡಕ್ಕರ, ಅಸೈಯದ್ ಇಂಬಿಚ್ಚಿಕ್ಕೋಯ ಜಮಾಲುಲೈಲ್ ತಂಙಳ್ ಕಾಟುಕುಕ್ಕೆ, ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಪ್ರೊ. ಅಲಿಕುಟ್ಟಿ ಮುಸ್ಲಿಯಾರ್ ಖಾಝಿ ಕಾಸರಗೋಡು, ಶರಘುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಬೇಕಲ ಇಬ್ರಾಹೀಂ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕೂಟುಂಬಾರ ಅಬ್ದುರ್ರಹ್ಮಾನ್ ದಾರಿಮಿ, ಡಾ.ಮುಹಮ್ಮದ್ ಫಾರೂಕ್ ನಯೀಮಿ ಕೊಲ್ಲಂ, ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್‌ಸೂಲ, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಕೀಚೆರಿ ಅಬ್ದುಲ್ ಗಫೂರ್ ವೌಲವಿ, ಹುಸೈನ್ ಸಅದಿ ಕೆ.ಸಿ.ರೋಡ್, ಮಜೀದ್ ಬಾಖವಿ ಕೊಡುವಳ್ಳಿ, ರಫೀಕ್ ಸಅದಿ ದೇಲಂಪಾಡಿ, ರಾಫಿ ಅಹ್ಸನಿ ಕಾಂತಪುರಂ ಮತ್ತಿತರರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್. ಇಬ್ರಾಹೀಂ ಸುಳ್ಯಮೆ, ಪ್ರಚಾರ ಸಮಿತಿಯ ಅಧ್ಯಕ್ಷ ಅಬ್ದುರ್ರಝಾಕ್ ಕೆ.ಕೆ., ಪ್ರಚಾರ ಸಮಿತಿ ಕಾರ್ಯದರ್ಶಿ ಹನೀಫ್ ಎ.ಕೆ. ಉಪಸ್ಥಿತರಿದ್ದರು.







