ಉಡುಪಿ ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರ

ಉಡುಪಿ, ಜ.10: ಉಡುಪಿ ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರವನ್ನು ಉಡುಪಿ ಬ್ರಹ್ಮಗಿರಿಯಲ್ಲಿರುವ ಬಾಲಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ತಾಲೂಕು ಮಟ್ಟದ ಕಲಾಶ್ರೀ ಶಿಬಿರದಲ್ಲಿ ಆಯ್ಕೆಯಾದ 24 ಮಕ್ಕಳು ಜಿಲ್ಲಾ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದರು.
ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಕಲೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿ ಷ್ಕಾರ ಎಂಬ ನಾಲ್ಕು ಪ್ರತಿಭಾ ಕ್ಷೇತ್ರಗಳಲ್ಲಿ ಆಯ್ಕೆ ಶಿಬಿರ ನಡೆಸಲಾಯಿತು. ಭಾಗ್ಯಲಕ್ಷ್ಮಿ ಉಪ್ಪೂರು, ಶಂಕರದಾಸ್ ಚೆಂಡ್ಕಳ, ಎಂ. ಎಸ್.ಭಟ್, ಜಯಂತಿ ಶೆಟ್ಟಿ, ಶೋಭಾ, ರೇಖಾ ಜಿ.ಮರಾಠೆ, ಯೋಗೀಶ್ ಕೊಳಲಗಿರಿ, ಮಂಜುನಾಥ ಬೈಲೂರು ತೀರ್ಪುಗಾರರಾಗಿ ಸಹಕರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು.
ದೀಪ್ತಿ ಡಿ ಹಾಗೂ ಹರ್ಷಿತಾ ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರವಾಣ ಪತ್ರಗಳನ್ನು ವಿತರಿಸಲಾಯಿತು.
Next Story





