ಪಂಜಾಬ್ ಗೆ ಆಮ್ ಆದ್ಮಿಯ ಸಿಎಂ ಅಭ್ಯರ್ಥಿ ಕೇಜ್ರಿವಾಲ್ ?

ಹೊಸದಿಲ್ಲಿ, ಜ.10: ಪಂಜಾಬ್ ವಿಧಾನಸಭಾ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆಂದು ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸುಳಿವು ನೀಡಿದ್ದಾರೆ. ಪಂಜಾಬ್‌ನ ಮೊಹಾಲಿಯಲಿ ಮಂಗಳವಾರ ಎಎಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ನೆರೆದಿದ್ದ ಜರನ್ನುದ್ದೇಶಿಸಿ ‘‘ಕೇಜ್ರಿವಾಲ್ ನಿಮ್ಮ ಮುಖ್ಯಮಂತ್ರಿಯಾಗಲಿದ್ದಾರೆಂದೇ ಭಾವಿಸಿ ಮತಚಲಾಯಿಸಿ’’ ಎಂದು ಕರೆ ನೀಡಿದ್ದಾರೆ.ಕೇಜ್ರಿವಾಲ್ ತನ್ನ ರಾಜಕೀಯ ನೆಲೆಯನ್ನು ದಿಲ್ಲಿಯಿಂದ ಪಂಜಾಬ್‌ಗೆ ವರ್ಗಾಯಿಸಲಿದ್ದಾರೆಂಬ ಈ ಮೊದಲಿನಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಸಿಸೋಡಿಯಾ ಅವರ ಈ ಹೇಳಿಕೆಯಿಂದ ಇನ್ನೂ ಹೆಚ್ಚಿನ ಬಲ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ಎಎಪಿಯು, ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಅಕಾಲಿದಳಕ್ಕೆ ಪ್ರಬಲವಾದ ಸವಾಲನ್ನೊಡ್ಡುತ್ತಿದೆ.ಈ ಮೊದಲು ಕೇಜ್ರಿವಾಲ್ ಪಂಜಾಬ್‌ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಇತ್ತೀಚೆಗೆ ನಡೆದ ಸ್ವಾರಸ್ಯಕರ ‘ಟ್ವೀಟರ್ ಸಮರ’’ವೊಂದರಲ್ಲಿ ಕೇಜ್ರಿವಾಲ್ ಅವರು ಕಾಂಗ್ರೆಸ್ ನಾಯಕ ಅಮರೀಂದರ್‌ರನ್ನು ಪಂಜಾಬ್ ಚುನಾವಣೆಗೆ ಸ್ಪರ್ಧಿಸಲು ಸುರಕ್ಷಿತವಾದ ಸ್ಥಳವೊಂದನ್ನು ಹುಡುಕುತ್ತಿರುವಿರಾ ಎಂದು ಛೇಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಮರೀಂದರ್‌ಸಿಂಗ್, ಧೈರ್ಯವಿದ್ದರೆ ತನ್ನ ಎದುರು ಸ್ಪರ್ಧಿಸಿ ಎಂದು ಕೇಜ್ರಿವಾಲ್‌ಗೆ ಸವಾಲೆಸೆದಿದ್ದರು.ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲಿ ಫೆಬ್ರವರಿ 4ರಂದು ಒಂದೇ ಹಂತದ ಚುನಾವಣೆ ನಡೆಯಲಿಎದ. ಮಾರ್ಚ್ 11ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.





