ಮಟ್ಕಾ ದಂಧೆ: ಇಬ್ಬರ ಸೆರೆ
ಮಂಗಳೂರು, ಜ.10: ನಗರ ಹೊರವಲಯದ ಕೊಂಚಾಡಿಯ ಬಸ್ ನಿಲ್ದಾಣದ ಹಿಂಬದಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಕಾವೂರು ಠಾಣೆಯ ಅಪರಾಧ ವಿಭಾಗದ ಎಸ್ಸೈ ರೋಸಮ್ಮ ಮತ್ತು ಸಿಬ್ಬಂದಿ ವರ್ಗ ಇಬ್ಬರನ್ನು ಬಂಧಿಸಿದ್ದಾರೆ.
ಕಾವೂರು ಮುಲ್ಲಕಾಡಿನ ಗಂಗಾಧರ ಮತ್ತು ದೇರೇಬೈಲ್‌ನ ಹರಿಶ್ಚಂದ್ರ ದೇವಾಡಿಗ ಬಂಧಿತ ಆರೋಪಿಗಳು. ಇವರು 3 ಅಂಕೆಯ ನಂಬರ್ ತೋರಿಸಿ ಮಟ್ಕಾ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಆರೋಪಿಗಳಿಂದ 2760 ರೂ. ವಶಪಡಿಸಿಕೊಂಡಿದ್ದಾರೆ.
ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





