ಮುಂಡಗೋಡ : ಪೊಲೀಸ್ ಇಲಾಖೆಯಿಂದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಆಚರಣೆ

ಮುಂಡಗೋಡ , ಜ.10 : 28 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಮುಂಡಗೋಡ ಪೊಲೀಸ್ ಇಲಾಖೆಯಿಂದ ವಾಹನ ಚಾಲಕರಿಗೆ ಜಾಗೃತಿ ಮೂಡಿಸಲಾಯಿತು.
ಮಂಗಳವಾರ ಬೆಳಗ್ಗೆ ಪಿಎಸ್‌ಐ ಲಕ್ಕಪ್ಪ ನಾಯಕ ನೇತೃತ್ವದಲ್ಲಿ ಪಟ್ಟಣದ ಅಟೋ ಚಾಲಕರಿಗೆ, ಬಸ್ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆಯ ಸುರಕ್ಷೆತೆಯ ಮಾಹಿತಿ ನೀಡಿದರು.
ರಸ್ತೆಯ ಸುರಕ್ಷತೆ ನಿಯಮ ಸರಿಯಾಗಿ ಪಾಲಿಸಿದರೆ ಅಪಘಾತಗಳು ಸಂಭವಿಸುವುದನ್ನು ತಡೆಯಬಹುದು. ಅಪಘಾತ ನಡೆಯದಂತೆ ನೋಡಿಕೊಳ್ಳುವುದೆ ಎಲ್ಲರ ಕರ್ತವ್ಯ ಎಂದರು.
Next Story





