ಟಿಪ್ಪರ್-ಬೈಕ್ ಢಿಕ್ಕಿ: ಓರ್ವ ಸಾವು
ಸಾಗರ, ಜ.10: ತಾಲೂಕಿನ ಆನಂದಪುರಂನ ಯಡೇಹಳ್ಳಿ ಸಮೀಪ ಹಾಲಿನ ಡೈರಿ ಎದುರು ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಆನಂದಪುರಂನ ಕಲ್ಕೊಪ್ಪನಿವಾಸಿ ಕೆ.ಸಿ. ವೀರಭದ್ರಪ್ಪಗೌಡ(56) ಅವರ ಪತ್ನಿ ರತ್ನಮ್ಮ ಅವರನ್ನು ಚಿಕಿತ್ಸೆಗಾಗಿ ದ್ವಿಚಕ್ರ ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು.
ರಿಪ್ಪನಪೇಟೆ ಕಡೆಯಿಂದ ಆನಂದಪುರಂ ಕಡೆ ಬರುತ್ತಿದ್ದ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಕೆ.ಸಿ. ವೀರಭದ್ರಪ್ಪಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಪತ್ನಿ ರತ್ನಮ್ಮ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





