ಅಂದರ್‌ಬಾಹರ್: 7ಮಂದಿ ಸೆರೆ
ಕುಂದಾಪುರ, ಜ.10: ಕಾವ್ರಾಡಿ ಗ್ರಾಮದ ಪಡುವಾಲ್ತೂರು ಎಂಬಲ್ಲಿ ಜ.9ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಡುವಾಲ್ತೂರಿನ ಸುರೇಶ್(35), ಭಾಸ್ಕರ(29), ರತೇಶ (24), ಅಣ್ಣಪ್ಪ(45), ರಾಜು(49), ಸೌಕೂರಿನ ಚಂದ್ರ(38), ನೇರಳ ಕಟ್ಟೆಯ ಮಂಜುನಾಥ(37) ಎಂದು ಗುರುತಿಸಲಾಗಿದೆ.
ಬಂಧಿತರಿಂದ 2,120ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





