ಜಮೀಯ್ಯತುಲ್ ಫಲಾಹ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಮಂಗಳೂರು, ಜ.10 : ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕ ವತಿಯಿಂದ ಎಸೆಸೆಲ್ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರವನ್ನು ಸರಕಾರಿ ಪೌಢಶಾಲೆ (ಉರ್ದು) ಬಂದರು, ಮಂಗಳೂರು ಇಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಫ್. ನಗರ ಘಟಕದ ಅಧ್ಯಕ್ಷರಾದ ಅಡ್ವೊಕೇಟ್ ಅಬ್ದುಲ್ ಅಝೀರ್ ವಹಿಸಿದ್ದರು.
ಜೆ.ಎಫ್.ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗು ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಯವರು ಕಾರ್ಯಾಗಾರವನ್ನು ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಂಜುಳಾ ಕೆ.ಎಲ್, ಶಿಕ್ಷಣ ಸಂಯೋಜಕರಾದ ಜಿ.ಉಸ್ಮಾನ್, ಬದ್ರಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಇಕ್ಬಾಲ್ ಮಾಸ್ಟರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಮುಹಮ್ಮದ್, ಜೆ.ಎಫ್ ನಗರ ಘಟಕದ ಸದಸ್ಯರಾದ ಬಿ.ಎಸ್.ಮುಹಮ್ಮದ್ ಬಶೀರ್, ಹಸನ್ ಶೂಕ್ಯಾಂಪ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಸರಕಾರಿ ಪ್ರೌಢಶಾಲೆ ನಡ, ಬೆಳ್ತಂಗಡಿ ಇಲ್ಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಯಾಕುಬ್ ಮಾಸ್ಟರ್ ಕೊಯ್ಯೂರ್, ಪರೀಕ್ಷಾ ಪೂರ್ವ ತಯಾರಿಗಳ ಬಗ್ಗೆ ಮತ್ತು ಗಣಿತ ಪಠ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಲಹೆಗಳನ್ನು ನೀಡಿ ಕಾರ್ಯಾಗಾರವನ್ನು ನಡೆಸಿದರು.
ಕಾರ್ಯಾಗಾರದಲ್ಲಿ ಬೆಂಗ್ರೆ ಕಸ್ಬಾ ಪ್ರೌಢಶಾಲೆ, ಬದ್ರಿಯಾ ಪ್ರೌಢಶಾಲೆ ಹಾಗು ಬಂದರು ಪ್ರೌಢಶಾಲೆಯ ಸುಮಾರು 95 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.
ಜೆ.ಎಫ್. ಪ್ರಧಾನ ಕಾರ್ಯದರ್ಶಿಯಾದ ಸಯ್ಯದ್ ಝುಬೈರ್ ಶಾಹ್ ಸ್ವಾಗತಿಸಿದರು , ಜೆ.ಎಫ್.ಕಾರ್ಯಕ್ರಮ ಸಂಯೋಜಕರಾದ ಶಹೀದ್ ಮೆಲ್ಕಾರ್ ನಿರೂಪಿಸಿದರು . ಬಂದರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಆಶಾ ನಾಯಕ್ ವಂದಿಸಿದರು.







