ಕುಕ್ಕೆ: ಕ್ಷೇತ್ರ ಸ್ವಚ್ಛತಾ ಆಂದೋಲನ

ಸುಬ್ರಹ್ಮಣ್ಯ, ಜ.10: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಗ್ರಾಪಂ ಹಾಗೂ ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಬೃಹತ್ ಕುಕ್ಕೆ ಕ್ಷೇತ್ರ ಸ್ವಚ್ಛತಾ ಆಂದೋಲನ ನಡೆಯಿತು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಂದೋಲನದಲ್ಲಿ ಕುಕ್ಕೆ ದೇವಳ, ಸುಬ್ರಹ್ಮಣ್ಯ ಮಠ, ಮೂರು ವಿದ್ಯಾಸಂಸ್ಥೆಗಳು ಮತ್ತು ಗ್ರಾಮಾಭಿವೃದ್ಧಿ ಯೋಜನಾ ಘಟಕಗಳು ಸೇರಿ 16 ಸಂಘ ಸಂಸ್ಥೆಗಳು ಸ್ವಚ್ಛತೆಯಲ್ಲಿ ಭಾಗವಹಿಸಿದ್ದವು. ಗ್ರಾಮಾಭಿವೃದ್ಧಿ ಯೋಜನೆಯ ಸುಮಾರು 400ಕ್ಕೂ ಅಧಿಕ ಸದಸ್ಯರು ಮತ್ತು ಸಂಘ ಸಂಸ್ಥೆಗಳ 400ಕ್ಕೂ ಅಧಿಕ ಸದಸ್ಯರು ಸೇರಿದಂತೆ 800ಕ್ಕೂ ಅಧಿಕ ಜನ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು. ಸಂಘ ಸಂಸ್ಥೆಗಳಿಗೆ ಪ್ರತ್ಯೇಕ ಪ್ರತ್ಯೇಕ ಪ್ರದೇಶಗಳಲ್ಲಿ ಶುಚಿತ್ವ ನಡೆಸಲು ಅವಕಾಶ ನೀಡಲಾಯಿತು. ಈ ಮೂಲಕ ಸಂಪೂರ್ಣ ಕ್ಷೇತ್ರದಲ್ಲಿ ಸ್ವಚ್ಛತಾ ಸೇವೆಯು ನೆರವೇರಿತು.







