ಜ.13ರಿಂದ ರಜತ ಮಹೋತ್ಸವ ಸಂಭ್ರಮ
ಮುಲ್ಕಿ, ಜ.10: ಇಲ್ಲಿನ ಕೆ.ಎಸ್.ರಾವ್ ನಗರ ದ.ಕ. ಜಿಪಂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಸರಕಾರಿ ಪ್ರೌಢ ಶಾಲೆಯ ರಜತ ಮಹೋತ್ಸವ ಸಂಭ್ರಮವು ಜ.13 ಮತ್ತು 14ರಂದು ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ, ಮುಲ್ಕಿ ನಪಂ ಮಾಜಿ ಅಧ್ಯಕ್ಷ ಬಿ.ಎಂ.ಆಸ್ೀ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೂಲ್ಕಿ ನಪಂ ನಗರೋತ್ಥ್ಥಾನ ಯೋಜನೆಯಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮ್ಯೆದಾನ ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ರಜತ ಮಹೋತ್ಸವದ ಅಂಗವಾಗಿ ಹೊರಾಂಗಣ ವೇದಿಕೆ ನಿರ್ಮಾಣಗೊಂಡಿದ್ದು ಶಿಕ್ಷಣ ಸಚಿವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜ.13ರಂದು ಬೆಳಗ್ಗೆ ಮುಲ್ಕಿ ಪೊಲೀಸ್ ಠಾಣಾಧಿಕಾರಿ ಅನಂತ ಪದ್ಮನಾಭ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಲ್ಕಿ ನಪಂ ಮಾಜಿ ಸದಸ್ಯ ಮಹಾಬಲ ಸನಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಲ್ಕಿ ನಪಂ ಮುಖ್ಯಾಧಿಕಾರಿ ಇಂದು, ಮುಲ್ಕಿ ಕ್ಲಸ್ಟರ್ ಸಿ.ಆರ್.ಪಿ. ರಾಮ್‌ದಾಸ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂಜೆ ಜರಗಲಿರುವ ರಜತ ಮಹೋತ್ಸವ ಸಮಾರಂಭವನ್ನು ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ. ಅಭಯಚಂದ್ರ ಜ್ಯೆನ್ ವಹಿಸುವರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಲಿದೆ. 14ರ ಸಂಜೆ ಜರಗುವ ಸಭಾ ಕಾರ್ಯಕ್ರಮವನ್ನು ಶಾಸಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಲಕಾಡಿ ವೇದಮೂರ್ತಿ ವಾದಿರಾಜಯ ಉಪಾಧ್ಯಾಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಜನಾರ್ದನ ಬಂಗೇರ, ಮಂಜುನಾಥ ಕಂಬಾರ, ಬಿ.ಎಂ.ಇದಿನಬ್ಬ, ಕೋಶಾಧಿಕಾರಿ ಸುಮತಿ ಬಾಯಿ, ಪ್ರಾಥಮಿಕ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಶಂಕರ್ ಆರ್.ಕೆ., ಪ್ರೌಢ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಶರ್ೀ, ಬಶೀರ್ ಕುಳಾಯಿ, ಮಹಾಬಲ ಸನಿಲ್ ಉಪಸ್ಥಿತರಿದ್ದರು.







