ನಾಳೆ ‘ಕೇಳುಮಾಸ್ತರ್’ರ ಕೃತಿ ಬಿಡುಗಡೆ
ಮಂಗಳೂರು, ಜ.10: ಕರ್ನಾಟಕ ಜಾನಪದ ಅಕಾಡಮಿ ಪುಸ್ತಕ ಪ್ರಶಸ್ತಿ ವಿಜೇತ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿಯ ಕೃತಿ ‘ಕಥಕ್ಕಳಿ’ಯ ಬಿಡುಗಡೆ ಕಾರ್ಯಕ್ರಮವು ಜ.12ರಂದು ಬೆಳಗ್ಗೆ 10 ಗಂಟೆಗೆ ನಗರದ ಓಶಿಯನ್‌ಪರ್ಲ್ ಸಭಾಂಗಣದಲ್ಲಿ ನಡೆಯಲಿದೆ.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕೃತಿ ಬಿಡುಗಡೆಗೊಳಿಸುವರು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು ಎಂದು ಕೈರಳಿ ಪ್ರಕಾಶನವು ಪ್ರಕಟನೆಯಲ್ಲಿ ತಿಳಿಸಿದೆ.
Next Story





