ಜ.17: ಸ್ವಾಮಿ ವಿವೇಕಾನಂದ ಉದ್ಯಾನವನ ಲೋಕಾರ್ಪಣೆ
ಮಂಗಳೂರು, ಜ.10: ಸ್ವಾಮಿ ವಿವೇಕಾನಂದರ ನೂತನ ಉದ್ಯಾನವನ ಲೋಕಾರ್ಪಣೆ ಮತ್ತು ಪ್ರತಿಮೆಯ ಅನಾವರಣವು ನಗರದ ಬಿಜೈ ಸಮೀಪದ ಕೊಡಿಯಾಲ್‌ಬೈಲ್‌ನ 30ನೆ ವಾರ್ಡ್‌ನಲ್ಲಿ ಜ.17ರಂದು ಬೆಳಗ್ಗೆ 9:30ಕ್ಕೆ ಜರಗಲಿದೆ ಎಂದು ಮನಪಾ ಸದಸ್ಯ, ಉದ್ಯಾನವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾರ್ಪಣೆಯ ಬಳಿಕ ಸ್ವಾಮಿ ವಿವೇಕಾನಂದರ 154ನೆ ಜನ್ಮೋತ್ಸವ ಕಾರ್ಯಕ್ರಮವು ಬಿಜೈ ಚರ್ಚ್ ಹಾಲ್‌ನಲ್ಲಿ ನಡೆಯಲಿದೆ. ಉದ್ಯಾನವನದ ಲೋಕಾರ್ಪಣೆಯನ್ನು ಶಾಸಕ ಜೆ.ಆರ್. ಲೋಬೊ ನೆರವೇರಿಸಲಿದ್ದಾರೆ. ಮುಖ್ಯ ಸಚೇತಕ ಐವನ್ ಡಿಸೋಜ, ಗಣೇಶ್ ಕಾರ್ಣಿಕ್, ರಾಮಕೃಷ್ಣ ಮಠದ ಅಧ್ಯಕ್ಷ ಚಿತಕಾಮಾನಂದಾಜಿ, ಬಿಜೈ ಚರ್ಚ್‌ನ ಧರ್ಮಗುರು ಾದರ್ ವಿಲ್ಸನ್ ವೈಟಸ್ ಡಿಸೋಜ, ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್ ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಂಡಾರಿ ಬಿಲ್ಡರ್ಸ್ ಕನ್ಸಲ್ಟಂಟ್ ವೇಣು ಶರ್ಮ, ರಘುರಾಜ್ ಕದ್ರಿ, ಮಮತಾ ಶೆಟ್ಟಿ, ದೇವಿಪ್ರಸಾದ್ ಕದ್ರಿ ಉಪಸ್ಥಿತರಿದ್ದರು.





