ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣ

ಮಂಗಳೂರು, ಜ.10: ಉಜಿರೆಯ ಜನಾರ್ದನ ದೇವಸ್ಥಾನದ ಆವರಣದಲ್ಲಿ ಜ.27, 28, 29ರಂದು ಡಾ.ಕೆ.ಚಿನ್ನಪ್ಪಗೌಡರ ಸರ್ವಾ ಧ್ಯಕ್ಷತೆಯಲ್ಲಿ ಜರಗಲಿರುವ 21ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನದ ಗೌರವಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. ಈ ಸಂದರ್ಭ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಜಯರಾಘವ ಪಡ್ವೆಟ್ನಾಯ, ಕಾರ್ಯದರ್ಶಿ ಡಾ. ಎಂ. ದಯಾಕರ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಗೌರವ ಕಾರ್ಯದರ್ಶಿ ಡಾ. ಎಂ.ಪಿ ಶ್ರೀನಾಥ್ ಮತ್ತು ಪೊಳಲಿ ನಿತ್ಯಾನಂದ ಕಾರಂತ ಉಪಸ್ಥಿತರಿದ್ದರು.
ಲಾಂಛನ ಆಯ್ಕೆತ್ರ ಕಲಾವಿದ ಪ್ರಮೋದ್‌ರಾಜ್ ರಚಿಸಿರುವ ಲಾಂಛನವು ಆಯ್ಕೆಗೊಂಡಿದೆ. ಕಲಾವಿದ ಜಾನ್ ಚಂದ್ರನ್‌ರ ನೇತೃತ್ವದ ಆಯ್ಕೆ ಸಮಿತಿಯು ಲಾಂಛನವನ್ನು ಆಯ್ಕೆಗೊಳಿಸಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
Next Story





