ಕಳೆದ 8 ವರ್ಷಗಳಲ್ಲಿ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ಅಮೆರಿಕ ಮಣ್ಣಿನಲ್ಲಿ ದಾಳಿ ನಡೆಸಲು ಸಾಧ್ಯವಾಗಲಿಲ್ಲ: ಒಬಾಮ
ಚಿಕಾಗೋದಲ್ಲಿ ಕೊನೆಯ ವಿದಾಯದ ಭಾಷಣ

ಚಿಕಾಗೊ, ಜ.11: ಕಳೆದ ಎಂಟು ವರ್ಷಗಳಲ್ಲಿ ಯಾವುದೇ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ಅಮೆರಿಕ ಮಣ್ಣಿನಲ್ಲಿ ದಾಳಿ ನಡೆಸಲು ಸಾಧ್ಯವಾಗಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ತಮ್ಮ ತವರು ಕ್ಷೇತ್ರ ಚಿಕಾಗೋದಲ್ಲಿ ಕೊನೆಯ ವಿದಾಯದ ಭಾಷಣ ಮಾಡಿದ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗಗೂ ಧನ್ಯವಾದ ಹೇಳಿದರು.
ನಿಮ್ಮೆಲ್ಲರ ಸಹಕಾರದಿಂದ ಅಮೆರಿಕ ಬಲಿಷ್ಠ ದೇಶವಾಗಿದೆ.ಪ್ರತಿಯೊಬ್ಬ ಪ್ರಜೆಯೂ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಅಮೆರಿಕದಲ್ಲಿ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತಮ್ಮ ವಿದಾಯದ ಭಾಷಣದಲ್ಲಿ ಭಯೋತ್ಪಾದನೆ, ಅಭಿವೃದ್ಧಿ ಮತ್ತು ಅಮೆರಿಕ ಯುವಕರಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಪ್ರಸ್ತಾಪಿಸಿದ ಒಬಾಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದು ಯಾವಾಗಲೂ ಕಠಿಣ. ಮುಸ್ಲಿಂ ಅಮೆರಿಕನ್ನರನ್ನು ತಾರತಮ್ಯದಿಂದ ನೋಡಲಾಗುತ್ತದೆ ಎಂಬ ಆರೋಪವನ್ನು ಒಬಾಮ ತಿರಸ್ಕರಿಸಿದರು.
ಒಬಾಮ ಭಾಷಣದ ಹೈಲೈಟ್ಸ್
*ನಾನೊಬ್ಬ ಪ್ರಜೆಯಾಗಿ ನನ್ನ ಬದುಕಿನ ಉಳಿದ ದಿನಗಳಲ್ಲಿ ನಿಮ್ಮೊಂದಿಗೆ ಇರುವೆನು.
*ಪ್ರಜಾಪ್ರಭುತ್ವದ ಕೆಲಸ ಯಾವಾಗಲೂ ಕಠಿಣ. ವಿವಾದಾತ್ಮಕ ಮತ್ತು ಕೆಲವೊಮ್ಮೆ ರಕ್ತಸಿಕ್ತ.
*ಹವಾಮಾನ ಬದಲಾವಣೆ ನಿರಾಕರಿಸುವುದು 'ಭವಿಷ್ಯದ ಪೀಳಿಗೆಗೆ ದ್ರೋಹ.'
*ರಶ್ಯ ಅಥವಾ ಚೀನಾಕ್ಕೆ ವಿಶ್ವಾದ್ಯಂತ ಪ್ರಭಾವ ಬೀರಲು ಸಾಧ್ಯವಿಲ್ಲ
* ಮುಸ್ಲಿಂ ಅಮೆರಿಕನ್ನರನ್ನು ತಾರತಮ್ಯದಿಂದ ನೋಡಲಾಗುತ್ತದೆ ಎಂಬ ಆರೋಪ ಆಧಾರರಹಿತ.
*ಯಾವುದೇ ವಿದೇಶೀ ಭಯೋತ್ಪಾದಕ ಸಂಘಟನೆಗೆ ಕಳೆದ ಎಂಟು ವರ್ಷಗಳಲ್ಲಿ ಅಮೇರಿಕಾದ ಮಣ್ಣಿನ ಮೇಲೆ ದಾಳಿ ನಡೆಸಲು ಸಾಧ್ಯವಾಗಲಿಲ್ಲ
*ನಮ್ಮ ದೇಶ ಸುದೃಢ ರಾಷ್ಟ್ರವಾಗಿದ್ದರೂ ಇಲ್ಲಿ ವರ್ಣ ಭೇದ ನೀತಿ ಇನ್ನೂ ಸವಾಲಾಗಿಯೇ ಉಳಿದುಕೊಂಡಿದೆ.
*ಉತ್ತರಾಧಿಕಾರಿಗೆ ಅಧಿಕಾರದ ಸುಗಮ ಹಸ್ತಾಂತರ
“America is not the project of any one person. Because the single most powerful word in our democracy is the word ‘We.’ ‘We The People.’ ‘We Shall Overcome.’ ‘Yes, We Can.’”
— PRESIDENT OBAMA







