ಕುನಿಲ್ ಇಲ್ಮ್ ಅಕಾಡಮಿಯ ವಾರ್ಷಿಕೋತ್ಸವ

ಮಂಗಳೂರು, ಜ.11: ದೇರಳಕಟ್ಟೆ-ನಾಟೆಕಲ್‌ನ ಕುನಿಲ್ ಇಲ್ಮ್ ಅಕಾಡಮಿಯ ನಾಲ್ಕನೆ ವಾರ್ಷಿಕೋತ್ಸವವು ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಶ್ರುತಿ ವಿದ್ಯಾರ್ಥಿಗಳು ಊರಿಗೆ ಹಾಗು ದೇಶಕ್ಕೆ ಒಳ್ಳೆಯ ಹೆಸರು ತರುವಂತಹ ಕೆಲಸ ಮಾಡಬೇಕು ಎಂದು ಕರೆ ನೀಡಿದರಲ್ಲದೆ, ತಾನು ಪೊಲೀಸ್ ಇಲಾಖೆಗೆ ಅಧಿಕಾರಿಯಾಗಿ ಆಯ್ಕೆಯಾಗಲು ಪಟ್ಟ ಶ್ರಮದ ಬಗ್ಗೆ ಮನದಟ್ಟು ಮಾಡಿದರು.
ಈ ಸಂದರ್ಭ ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್‌ರಿಗೆ ‘ಕುನಿಲ್ ಇಲ್ಮ್ ಅವಾರ್ಡ್’ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಬ್ರಾಹೀಂ ಕೋಡಿಜಾಲ್, ಈ ಶಾಲೆಯು ದ.ಕ.ಜಿಲ್ಲೆಯ ಹೆಸರಾಂತ ವಿದ್ಯಾಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಫಕ್ರುದ್ದೀನ್ ಕುನಿಲ್ ವಿದ್ಯಾರ್ಥಿಗಳಿಗೆ ಶಿಸ್ತು ಹಾಗು ಪಠ್ಯೇತರ ಚಟುವಟಿಕೆಗಳ ಕುರಿತು ಹಿತವಚನ ನುಡಿದರು.
ಸಂಸ್ಥೆಯ ಉಪಾಧ್ಯಕ್ಷ ಹಾಗು ಶಾಲೆಯ ಆಡಳಿತಾಧಿಕಾರಿ ಪಿ.ಎಸ್. ಮೊಯ್ದಿನ್, ವಿದ್ಯಾರ್ಥಿಗಳು ಹಾಗು ಶಿಕ್ಷಕರ ಅಭಿವೃದ್ಧಿ ಕುರಿತು ಹಾಕಿಕೊಂಡ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಸಲಹಾ ಸಮಿತಿಯ ಪ್ರಮುಖ ಸದಸ್ಯರಾದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಲ್.ಧರ್ಮ , ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮಂಜುನಾಥ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲ ರೇಖಾ ಚಂದ್ರಕಾಂತ್ ವರದಿ ವಾಚಿಸಿದರು.
ಸಭೆಯಲ್ಲಿ ಉಪಪ್ರಾಂಶುಪಾಲೆ ರೇಶ್ಮಾ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಆದಿಲ್ ಸೂಪಿ ನುರಿತ ಸಿಬ್ಬಂದಿ ವರ್ಗಕ್ಕೆ ಬಹುಮಾನ ವಿತರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







