ಆನ್‌ಲೈನ್ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಉಳ್ಳಾಲ , ಜ.11 : ಉಳ್ಳಾಲ ಪಡಿತರ ಚೀಟಿ ಸೇವಾ ಕೇಂದ್ರದಲ್ಲಿ ಆನ್ ಲೈನ್ ಪಡಿತರ ಚೀಟಿ ವಿತರಣಾ ಕಾರ್ಯಕ್ರಮವನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಆಬ್ದುಲ್ ರಶೀದ್ ಹಾಜಿಯವರು ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಆಬ್ದುಲ್ ರಶೀದ್ ಹಾಜಿಯವರು 20 ವರ್ಷದಿಂದ ಗೊಂದಲದಲ್ಲಿದ್ದ ಪಡಿತರಚೀಟಿ ಸಮಸ್ಯೆಯನ್ನು ಆಹಾರ ಸಚಿವ ಯು,ಟಿ,ಖಾದರ್ ಅವರು ಕೇವಲ 8 ತಿಂಗಳಲ್ಲಿ ಕ್ರಾಂತಿಕಾರಿ ಬದಲಾವಣೆಯ ಮೂಲಕ ಪರಿಹರಿಸಿದ್ದಾರೆ. ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞ ಮೋನು, ಉಳ್ಳಾಲ ನಗರ ಸಭೆ ಆಯುಕ್ತೆ ಶ್ರೀಮತಿ ವಾಣಿ.ವಿ.ಆಳ್ವ, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ನಗರ ಸಭಾ ಸದಸ್ಯರಾದ ಮುಹಮ್ಮದ್ ಹನೀಫ್, ಮುಸ್ತಫ ಅಬ್ದುಲ್ಲಾ, ಮುಹಮ್ಮದ್ ಮುಕ್ಕಚ್ಚೇರಿ, ಮಾಜಿ ಸದಸ್ಯರಾದ ಉಸ್ಮಾನ್ ಕಲ್ಲಾಪು,ಬಾಝಿಲ್ ಡಿಸೋಜ, ಹಮೀದ್ ಕೋಡಿ, ಯು.ಕೆ.ಯೂಸುಫ್, ಯು.ನಝೀರ್ ಕೋಡಿ. ಇಂತಿಯಾರ್ ಅನ್ವರ್, ಮುಹಮ್ಮದ್ , ರಹಮತ್ ಕೋಡಿ, ಮಮತ ಪೂಜಾರಿ, ಉಪಸ್ಥಿತರಿದ್ದರು.
ಉಳ್ಳಾಲ ಪಡಿತರ ಚೀಟಿ ಸೇವಾ ಕೇಂದ್ರದ ಅಯ್ಯೂಬ್ ಯು.ಪಿ ಸ್ವಾಗತಿಸಿದರು.





