‘ಪಂಪ ಪ್ರಶಸ್ತಿ’ಗೆ ಡಾ.ಹಂಪನಾ ಆಯ್ಕೆ :ಸಚಿವೆ ಉಮಾಶ್ರೀ

ಬೆಂಗಳೂರು, ಜ. 11: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಪ್ರಶಸ್ತಿಯು 3ಲಕ್ಷ ರೂ.ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿಯನ್ನು ಕದಂಬೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಚಿವೆ ಉಮಾಶ್ರೀ ಬುಧವಾರ ಪ್ರಕಟಿಸಿದ್ದಾರೆ.
‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಉತ್ತರ ಕನ್ನಡದ ಲೇಖಕಿ ಡಾ.ಶಾಂತಿ ನಾಯಕ, ‘ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಬೆಳಗಾವಿಯ ಹಸನ್ ನಯೀಂ ಸುರಕೋಡ, ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಗೆ ಕಲಬುರಗಿಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ, ‘ಸಂತ ಶಿಶುನಾಳ ಶರೀಫ್ ಪ್ರಶಸಿ’್ತಗೆ ವೈ.ಕೆ. ಮುದ್ದುಕೃಷ್ಣ, ‘ನಿಜಗುಣ ಪುರಂದರ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆ ಗಣಪತಿ ಭಟ್ ಹಾಸಣಗಿ, ‘ಕುಮಾರವ್ಯಾಸ ಪ್ರಶಸ್ತಿ’ಗೆ ಕೋಲಾರದ ಎನ್.ಆರ್.ಜ್ಞಾನಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
ಮೇಲ್ಕಂಡ ಈ ಎಲ್ಲ್ಲ ಪ್ರಶಸ್ತಿಗಳೂ ತಲಾ 3ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಶೀಘ್ರದಲ್ಲೆ ಪ್ರಕಟಿಸಲಾಗುವುದು ಎಂದು ಸಂಸ್ಕೃತಿ ಸಚಿವೆ ಉಮಾಶ್ರೀ ಅಧಿಕೃತ ಪ್ರಕಟಣೆಯಲ್ಲಿ ಹೇಳಿದ್ದಾರೆ.





