ರೈಲಿನಲ್ಲಿ ಪ್ರಯಾಣಿಕರ ಸೊತ್ತು ಕಳವು
ಮಣಿಪಾಲ, ಜ.11: ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗಿನಲ್ಲಿದ್ದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮುಂಬೈಯ ಶರದ್ ವಿಠ್ಠಲ್ ಪವಾರ್(59) ಎಂಬವರು ತನ್ನ ಸ್ನೇಹಿತ ರೊಂದಿಗೆ ಜ.10ರಂದು ಮದ್ಯಾಹ್ನ ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಹೊರಟಿದ್ದು, ಜ.11ರಂದು ಬೆಳಗಿನ ಜಾವ 3:30ರ ಸುಮಾರಿಗೆ ರೈಲು ಕಾರವಾರ ನಿಲ್ದಾಣದ ತಲುಪಿದಾಗ ಕಳ್ಳರು ಶರದ್ ವಿಠಲ್ ಪವಾರ್ ಅವರ ಲಗೇಜ್ ಬ್ಯಾಗ್ ಕಳವುಗೈದಿದ್ದಾರೆ.
ಬ್ಯಾಗ್‌ನಲ್ಲಿ 600ರೂ. ನಗದು, ಎರಡು ಮೊಬೈಲ್, ಎಟಿಎಂ ಕಾರ್ಡ್ ಗಳು, ಪಾನ್‌ಕಾರ್ಡ್, ಆಧಾರ್ ಕಾರ್ಡ್, ಕ್ಯಾಮೆರಾ, ಬಟ್ಟೆಬರೆಗಳಿದ್ದು, ಇವುಗಳ ಒಟ್ಟು ಮೌಲ್ಯ 22,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





