ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿ ಇ.ಅಬೂಬಕರ್ ಆಯ್ಕೆ

ಕ್ಯಾಲಿಕಟ್, ಜ.11: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ದ ರಾಷ್ಟ್ರೀಯ ಅಧ್ಯಕ್ಷರಾಗಿ ಇ. ಅಬೂಬಕರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೇರಳದ ಮಲಪ್ಪುರಂನ ಮಲಬಾರ್ ಹೌಸ್‌ನಲ್ಲಿ ನಡೆದ ನ್ಯಾಷನಲ್ ಜನರಲ್ ಅಸೆಂಬ್ಲಿಯಲ್ಲಿ ನೂತನ ಅವಧಿಗೆ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಎಂ. ಮುಹಮ್ಮದ್ ಅಲಿ ಜಿನ್ನಾ, ಉಪಾಧ್ಯಕ್ಷರಾಗಿ ಒ.ಎಂ.ಎ. ಸಲಾಮ್, ಕಾರ್ಯದರ್ಶಿಗಳಾಗಿ ಅಬ್ದುಲ್ ವಾಹಿದ್ ಸೇಠ್ ಮತ್ತು ಅನೀಸ್ ಅಹ್ಮದ್, ಕೋಶಾಧಿಕಾರಿಯಾಗಿ ಮುಹಮ್ಮದ್ ಶಾಬುದ್ದೀನ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಂ.ಶರೀಫ್, ಇ.ಎಂ.ಅಬ್ದುರ್ರಹ್ಮಾನ್, ಪಿ.ಕೋಯ, ಇ.ಸಯೀದ್, ಮೊಯ್ದಿನ್‌ಕುಟ್ಟಿ ಫೈಝಿ, ಎ.ಎಸ್.ಇಸ್ಮಾಯೀಲ್, ಮುಹಮ್ಮದ್ ಯೂಸುಫ್, ಮುಹಮ್ಮದ್ ರೋಶನ್, ವೈ.ಎ. ಮೊಯ್ದಿನ್, ಅಬ್ದುಸ್ಸಮದ್, ಎಂ.ಕರಮನ ಅಶ್ರಫ್ ಮೌಲವಿ, ಅಶ್ರಫ್ ಅಂಕಜಾಲ್ ಆಯ್ಕೆಯಾದರು.
ಸಮಾಜದ ಎಲ್ಲ ವರ್ಗಗಳ ಸಬಲೀಕರಣಕ್ಕಾಗಿ ಹೋರಾಟವನ್ನು ಮುಂದುವರಿಸುವ ನಿರ್ಧಾರ ದೊಂದಿಗೆ ಸಭೆಯು ಸಮಾಪನಗೊಂಡಿತು.
Next Story





