‘ದಿಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಅವಾರ್ಡ್-16’ಗೆ ಅರ್ಜಿ ಆಹ್ವಾನ
ಮಂಗಳೂರು, ಜ.11: ಎಕೆ ಗ್ರೂಪ್ ಆ್ಯಂಡ್ ಆ್ಯಪಲ್ ಪ್ಲೆವುಡ್, ಆರ್ಕಿಟೆಕ್ಟ್ ಗಿಲ್ಡ್ ಸಹಯೋಗದಲ್ಲಿ ದಿಲ್ಲಿ ಫರ್ನಿಚರ್ ಇಂಟೀರಿಯರ್ ಡಿಸೈನ್ ಪ್ರಶಸ್ತಿ-2016ನ್ನು ಘೋಷಿಸಿದ್ದು, ಈ ಪ್ರಶಸ್ತಿಯು ವಾಸ್ತು ಶಿಲ್ಪಿಗಳಿಗೆ, ಒಳಾಂಗಣ ವಿನ್ಯಾಸಗಾರರಿಗೆ ಹಾಗೂ ವಿನ್ಯಾಸ ತಂಡಗಳಿಗೆ ಉತ್ತಮ ವೇದಿಕೆ ಒದಗಿಸಿಕೊಡಲಿದೆ. ಸ್ಪರ್ಧೆಯಲ್ಲಿ ಉಡುಪಿ ಹಾಗೂ ಮಂಗಳೂರಿನ ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿನಿರತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಜ.14 ಕೊನೆಯ ದಿನ.
ಪ್ರಶಸ್ತಿಗೆ ಪ್ರವೇಶಗಳನ್ನು ಆನ್ಲೈನ್ ಅಥವಾ ಹಾರ್ಟ್ ಕಾಪಿ ಅರ್ಜಿಗಳ ಮೂಲಕ ಸಲ್ಲಿಸಬಹುದಾಗಿದ್ದು, ಒಳಾಂಗಣ ವಿನ್ಯಾಸ ಪ್ರಶಸ್ತಿಯು ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಎಂಬ ಎರಡು ವಿಭಿನ್ನ ವರ್ಗವನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಅರ್ಜಿಗಳು ವಿನೂತನ ಒಳಾಂಗಣ ವಿನ್ಯಾಸ ಪ್ರಶಸ್ತಿಗೆ ಹಾಗೂ ವೃತ್ತಿಪರರ ಪ್ರವೇಶಗಳು ಎರಡು ವಿಭಿನ್ನ ಪ್ರಶಸ್ತಿಗಳಿಗೆ ಅರ್ಹವಾಗಿರುತ್ತವೆ. ಒಳಾಂಗಣ ವಿನ್ಯಾಸ ಸ್ಪರ್ಧೆಗೆ ಬ್ಯಾಚುಲರ್ ಡಿಗ್ರಿ ಅಥವಾ ಬಿಆರ್ಚ್(ಐಡಿ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
*ಅಗತ್ಯಗಳು: ಎರಡು ಬಿಎಚ್ಕೆ ಮನೆಯ ಅಥವಾ ್ಲಾಟ್‌ನ ಒಳಾಂಗಣ ವಿನ್ಯಾಸದಲ್ಲಿ ಒಂದು ೆಯರ್, ಲಿವಿಂಗ್ ರೂಮ್, ಡೈನಿಂಗ್ ರೂಮ್, ಕಿಚನ್ ಹಾಗೂ ಬೆಡ್ರೂಮ್‌ಗಳಿರಬೇಕು. ಎಲ್ಲ ಸಲ್ಲಿಕೆಗಳು ಎ2 ಗಾತ್ರದ ಶೀಟ್‌ಗಳಲ್ಲಿದ್ದು, ಪೋಟ್ರೈಟ್ ಅಥವಾ ಲ್ಯಾಂಡ್
ಸ್ಕೇಪ್ ರೂಪದಲ್ಲಿರಬೇಕು. ಲೈವ್ ಪ್ರಾಜೆಕ್ಟ್‌ಗಾಗಿ ಯೋಜನೆಯ 3ಡಿ ಇಮೇಜ್ ಹಾಗೂ 2ಡಿ ಡ್ರಾಯಿಂಗ್, ವಿಭಾಗ ಅಥವಾ ವಿಭಾಗವಾರು ಎಲಿವೇಶನ್, ಹಾರ್ಟ್ಕಾಪಿಯ ಜತೆಗೆ ಡಿಜಿಟಲ್ ೆಟೊಗಳ ಸಿಡಿ ನೀಡಬೇಕು. ಅಲ್ಲದೇ ಛಾಯಾಚಿತ್ರಗಳು, ಮಾಡಲ್ ಹಾಗೂ ಸ್ಕೆಚ್ಗಳು ಹಾಗೂ ವೀಡಿಯೊಗಳನ್ನು ಸಿಡಿಗಳಲ್ಲಿ ಎಂಪೆಗ್ ೈಲ್ ರೂಪದಲ್ಲಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಬ್ರಿಜೇಶ್ ಶರ್ಮಾ, (ಮೊ.ನಂ.: 9148946156) ಡೆಲ್ಲಿ ರ್ನಿಚರ್‌ಪ್ಲಾಟ್ ನಂ. 409 - 410, ಕೈಗಾರಿಕಾ ಪ್ರದೇಶ, ಬೈಕಂಪಾಡಿ, ಮಂಗಳೂರು 575011 ಅಥವಾ ರ್ಹಾನ್ ಸುಹೈಬ್ (ಮೊ.ನಂ.:7204638394) ದಿಲ್ಲಿ ರ್ನಿಚರ್ ಎಕ್ಸ್ವೆಂಟ್ಸ್, 3ನೆ ಮಹಡಿ, ಾರ್ಚ್ಯೂನ್ ಬಿಲ್ಡಿಂಗ್, ಅತ್ತಾವರ, ಮಂಗಳೂರು ಇಲ್ಲಿ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.







