ಎಸ್ಸೆಸೆಫ್ ಮುಡಿಪು ಸೆಕ್ಟರ್ ಮಹಾಸಭೆ: ಮುಡಿಪು ಸೌತ್ ಸೆಕ್ಟರ್ ರಚನೆ

ಮುಡಿಪು, ಜ.12: ಎಸ್ಸೆಸೆಫ್ ಮುಡಿಪು ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಮಜ್ಲಿಸ್ ಎಜು ಪಾರ್ಕ್ ಮುಡಿಪುವಿನಲ್ಲಿ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಕಾಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿವಿಷನ್ ವೀಕ್ಷಕರಾಗಿ ಖುಬೈಬ್ ತಂಙಲ್ ಮತ್ತು ಡಿವಿಷನ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮುಖ್ಯಅತಿಥಿಯಾಗಿ ಆಗಮಿಸಿದ್ದರು.
ಮಹಾಸಭೆಯ ನಂತರ ಮುಡಿಪು ಸೌತ್ ಸೆಕ್ಟರ್ ರಚನೆಗೊಂಡು ಅಧ್ಯಕ್ಷರಾಗಿ ಸಿದ್ದೀಕ್ ಹಿಮಮಿ ಬಾಳೆಪುಣಿ, ಪ್ರ.ಕಾರ್ಯದರ್ಶಿಯಾಗಿ ಮುಸ್ತಫಾ ಮುಸ್ಲಿಯಾರ್ ಇರಾ, ಕೋಶಾಧಿಕಾರಿಯಾಗಿ ಅಝೀಝ್ ಎಚ್ .ಕಲ್ಲು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮನಾಝಿರ್ ಮಾಸ್ಟರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹೈದರ್ ಸಅದಿ ಪರಪ್ಪು, ಸಿದ್ದೀಕ್ ಕಡ್ವಾಯಿ ಮೂಳೂರು, ಜೊತೆ ಕಾರ್ಯದರ್ಶಿಯಾಗಿ ಆಸೀಪ್ ಕಡ್ವಾಯಿ ಮತ್ತು ಇಕ್ಬಾಲ್ ಮುದುಂಗಾರ್, ಇದರೊಂದಿಗೆ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
Next Story





