ಕೆಲಸದ ಒತ್ತಡದಿಂದ ವ್ಯಾಯಾಮ ಕಷ್ಟವೇ ? : ಈ ಸರಳ ವಿಧಾನಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ
ಆರೋಗ್ಯಕರವಾಗಿರುವುದು ಮತ್ತು ಫಿಟ್ ಆಗಿರುವುದಕ್ಕೆ ಸರಿಯಾದ ಆಹಾರದ ಆಯ್ಕೆಗಳನ್ನು ಮೀರಿದ ಅಗತ್ಯಗಳಿವೆ. ಅಂದರೆ, ಆರೋಗ್ಯಕರ ಶಿಸ್ತಿನ ಆಹಾರವನ್ನು ಹೆಚ್ಚಿನ ದೈಹಿಕ ಚಟುವಟಿಕೆಯ ಮೂಲಕ ಪಡೆಯುವುದು. ವರ್ಲ್ಡ್ ವೈಡ್ ನ್ಯೂಟ್ರಿಶನ್ ಎಜುಕೇಶನ್ ಆಂಡ್ ಟ್ರೈನಿಂಗ್ ಸಂಸ್ಥೆ ಹರ್ಬಲೈಫ್ ನಿರ್ದೇಶಕಿ ಸೂಸಾನ್ ಬರ್ಮನ್ ಕೆಲವೊಂದು ಸಲಹೆಗಳನ್ನು ಜಿಮ್ ಹೋಗಲು ಸಾಧ್ಯವಾಗದಷ್ಟು ತಮ್ಮ ಜೀವನದಲ್ಲಿ ಬ್ಯುಸಿ ಇರುವವರಿಗಾಗಿ ಇಲ್ಲಿ ಕೊಟ್ಟಿದ್ದಾರೆ.
ಕಚೇರಿಯ ಕುರ್ಚಿ ಬಿಡಿ
ಕಚೇರಿಯ ಸೆಟ್ಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಮಾತ್ರಕ್ಕೆ, ಸಕ್ರಿಯರಾಗಿರಬಾರದು ಎಂದೇನಿಲ್ಲ. ಹೆಚ್ಚು ಚಟುವಟಿಕೆಯನ್ನು ನಿತ್ಯ ಜೀವನದಲ್ಲಿ ತಂದುಕೊಳ್ಳುವುದು ಸರಳ. ನಿಂತುಕೊಂಡೇ ಫೋನ್ ನಲ್ಲಿ ಸಂಭಾಷಣೆ ಮಾಡುವುದು, ನಡೆಯುತ್ತಾ ಸಭೆಯಲ್ಲಿ ಮಾತನಾಡುವುದು, ಅಥವಾ ಲಿಫ್ಟ್ ಬದಲಾಗಿ ಮೆಟ್ಟಿಲುಗಳನ್ನು ಬಳಸುವುದು ಮಾಡಬಹುದು.
ಮಧ್ಯಾಹ್ನದ ಭೋಜನದ ನಂತರ ನಡಿಗೆ
ಮಧ್ಯಾಹ್ನದ ಭೋಜನದ ಬಳಿಕ ಶಕ್ತಿಯನ್ನು ಮರಳಿ ಪಡೆಯಲು ಸ್ವಲ್ಪ ದೂರ ವಾಕ್ ಹೋಗುವುದು ಉತ್ತಮ. ಇತ್ತೀಚೆಗಿನ ಅಧ್ಯಯನದ ಪ್ರಕಾರ ಮಧ್ಯಾಹ್ನದ ಭೋಜನದ ನಂತರದ ನಡಿಗೆ ಮನಸ್ಸಿಗೆ ಹೆಚ್ಚು ಚೈತನ್ಯ ನೀಡಿ ಕೆಲಸದ ಒತ್ತಡ ನಿಭಾಯಿಸಲು ನೆರವಾಗುತ್ತದೆ. ಹೀಗಾಗಿ ನಡಿಗೆ ಹಿತಕರವಾದ ವ್ಯಾಯಾಮವನ್ನೂ ಭೋಜನಕ್ಕೆ ಸೇರಿಸಲಿದೆ.
ಯೋಚಿಸಿ ತಿನ್ನುವುದು
ಆಹಾರದ ರುಚಿ ನೋಡುವುದು, ತರಾತುರಿ ಮಾಡದೆ ಇರುವುದು, ಉತ್ತಮ ಉತ್ಸಾಹದಲ್ಲಿ ಅಡುಗೆ ಮಾಡಿ ತಿನ್ನುವುದು, ಹೆಚ್ಚು ನೀರು ಕುಡಿಯುವುದು, ಮೃದು, ರಿಲ್ಯಾಕ್ಸ್ ಸಂಗೀತ, ನಿಜವಾದ ಟೇಬಲ್ ಮೇಲೆ ಕೂರುವುದು, ಪ್ರಿಯ ಆಹಾರವನ್ನು ಕೊನೆಗೆ ಸೇವಿಸುವುದು, ಒಂದೇ ಸಮಯದಲ್ಲಿ ಬಹಳ ಕೆಲಸ ಮಾಡುವುದು, ನಿಮ್ಮ ದೇಹ ಮತ್ತು ಆರೋಗ್ಯವನ್ನು ಗೌರವಿಸುವುದು ಅಗತ್ಯ. ಯೋಚನೆ ಮಾಡಿ ತಿನ್ನಿ.
ದೇಹಕ್ಕೆ ಸಾಮರ್ಥ್ಯ ಕೊಡುವಂತಹ ಆಹಾರ ಸೇವನೆಯತ್ತ ಗಮನಕೊಡಿ. ನಿತ್ಯದ ಆಹಾರ ಅಭ್ಯಾಸವನ್ನು ಶಿಸ್ತು ಮತ್ತು ಆರೋಗ್ಯಕರವಾಗಿರುವಂತೆ ಸರಳ ನಿಯಮಗಳ ಮೂಲಕ ರೂಪಿಸಿ. ತರಕಾರಿಗಳು, ಇಡೀ ಹಣ್ಣುಗಳನ್ನು ಭೋಜನದಲ್ಲಿ ಸೇವಿಸಿ. ಕೊಬ್ಬಿನಂಶವಿರುವ ಆಹಾರ ಮತ್ತು ಸಿಹಿತಿನಿಸುಗಳನ್ನು ಕಡಿಮೆ ತಿನ್ನಿ.
ಸವಾಲು ಹಾಕಿಕೊಳ್ಳಿ.
ಮಣ್ಣಿನ ರಸ್ತೆಗಳು ಮತ್ತು ಕಡಿದಾದ ರಸ್ತೆಗಳಲ್ಲಿ ಓಡಿ ದೇಹದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ
ಅಂತರ್ಜಾಲ ಫಿಟ್ನೆಸ್ ಸಮುದಾಯ
2016ರಲ್ಲಿ ಟೆಕ್ ಫಿಟ್ ಉದ್ಯಮ ಬಹಳ ಅಭಿವೃದ್ಧಿ ಸಾಧಿಸಿದೆ. ವಿದೇಶಿ ನೆಲದಲ್ಲಿ ಫಿಟ್ನೆಸ್ ಹೇಳಿಕೊಡುವ ತರಬೇತುದಾರನ ಜೊತೆಗೆ ಮನೆಯಲ್ಲಿಯೇ ಕುಳಿತು ವ್ಯಾಯಾಮ ಮಾಡುವುದು ಸುಲಭ. ಸಲಹೆಗಳಿಗಾಗಿ ಫಿಟ್ನೆಸ್ ಆಪ್ ಬಳಸಬಹುದು.