ವಿವಾಹಕ್ಕೆ 2.5ಲಕ್ಷ ರೂ. ಕೊಡಲು ನಿರಾಕರಿಸಿದ ಬ್ಯಾಂಕುಗಳು

ತಿರುವನಂತಪುರಂ,ಜ.12: ನೋಟು ಅಮಾನ್ಯ ಹಿನ್ನೆಲೆಯಲ್ಲಿ ಕೇರಳದಲ್ಲಿ ಹಲವು ಬ್ಯಾಂಕ್‌ಗಳು ಮದುವೆಗಳಿಗೆ ರಿಸರ್ವ್ ಬ್ಯಾಂಕ್ ನಿಗದಿ ಗೊಳಿಸಿರುವ 2.5 ಲಕ್ಷರೂಪಾಯಿಯನ್ನೇ ನೀಡಲು ನಿರಾಕರಿಸುತ್ತಿವೆ ಎಂದು ವರದಿಯಾಗಿದೆ. ಡಿಸೆಂಬರ್ 30ವರೆಗೆ ನಿಗದಿಯಾಗಿದ್ದ ಮದುವೆಗಳಿಗೆ2.5 ಲಕ್ಷರೂಪಾಯಿ ನಿಬಂಧನೆಗಳ ಅಡಿಯಲ್ಲಿ ನೀಡಲು ರಿಸರ್ವ್‌ಬ್ಯಾಂಕ್ ಸುತ್ತೋಲೆ ಕಳುಹಿಸಿತ್ತು. ಡಿಸೆಂಬರ್ 30ರವರೆಗೆ ಇಷ್ಟು ಮೊತ್ತವನ್ನು ಮದುವೆಗಳಿಗಾಗಿ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆದ್ದರಿಂದ ಡಿಸೆಂಬರ್‌ಗೆ ಸುತ್ತೋಲೆಯ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕೆಲವು ಬ್ಯಾಂಕ್‌ಗಳು ಮದುವೆಗಳಿಗೆ ನಿಗದಿತ ಮೊತ್ತ ನೀಡಲು ನಿರಾಕರಿಸುತ್ತಿವೆ.
ರಿಸರ್ವ್ ಬ್ಯಾಂಕ್ ಈ ಬಗ್ಗೆ ಈವರೆಗೂ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ವಾರದಲ್ಲಿ 24,000ರೂಪಾಯಿ ಪಡೆಯಬೇಕೆಂದು ನಿಯಂತ್ರಣವಿದ್ದು ಇದರಲ್ಲಿ ಯಾವುದೇ ಬದಲಾವಣೆಯನ್ನು ಸುಪ್ರೀಂಕೋರ್ಟು ಮಾಡಿಲ್ಲ. 2.5 ಲಕ್ಷ ರೂಪಾಯಿ ಏಕ ಕಾಲದಲ್ಲಿ ಪಡೆಯಬೇಕಾದರೆ ಬ್ಯಾಂಕುಗಳು ಹಲವಾರು ನಿಬಂಧನೆಗಳನ್ನು ಹಾಕುತ್ತಿವೆ ಎನ್ನಲಾಗಿದೆ. ವಿವಾಹಕ್ಕೆ ಸಂಬಂಧಿಸಿದ ವ್ಯವಹಾರಗಳ ವಿವರಗಳು, ಪ್ರಮಾಣ ಪತ್ರ, ಮದುವೆ ನಿಶ್ಚಯಿಸಿದ ದಾಖಲೆ ಬ್ಯಾಂಕಿಗೆ ಹಾಜರುಪಡಿಸಿದರೆ ಮಾತ್ರ ಹಣ ನೀಡಲಾಗುತ್ತದೆ . ಏನೂ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದವರು ಮಾತ್ರವೇ ಬ್ಯಾಂಕ್‌ನಲ್ಲಿ ಕ್ಯೂ ನಿಂತು ಹಣ ಪಡೆಯುತ್ತಿದ್ದಾರೆ.
ಎಟಿಎಂನಿಂದಹಣ ಪಡೆಯುವವರಿಗೆ ಬ್ಯಾಂಕ್‌ಗಳು ಸರ್ವೀಸ್ ಚಾರ್ಜು ಪಡೆಯುವುದು ಪುನರಾರಂಭಿಸಿದೆ. ಆದರೆ, ಕೇರಳದ ಎಲ್ಲಬ್ಯಾಂಕುಗಳ ಎಟಿಎಂಗಳು ಇನ್ನು ಕೂಡಾ ಪುನರಾರಂಭಗೊಂಡಿಲ್ಲ. ಬ್ಯಾಂಕ್ ಮೂಲಕ ಕಪ್ಪುಹಣವನ್ನು ಪತ್ತೆಹಚ್ಚುವುದಕ್ಕಾಗಿ ಫಾರಂ 60 ಪ್ರಕಾರ ಹಣ ಹೂಡಿಕೆ ಮಾಡಿದವರ ವಾಚರ್‌ಗಳನ್ನು ಪರಿಶೀಲಿಸಿ ಏನಾದರೂ ಅಸಮರ್ಪಕತೆ ಇದ್ದರೆ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸಲು ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ. ಪಾನ್ ಕಾರ್ಡ್ ಇಲ್ಲದವರು ಐವತ್ತು ಸಾವಿರಕ್ಕಿಂತ ಹೆಚ್ಚು ಹಣ ಬ್ಯಾಂಕ್‌ನಲ್ಲಿ ಹಾಕಲು ಫಾರಂ 60 ಭರ್ತಿ ಮಾಡಿಕೊಡಬೇಕಾಗಿದೆ.







