ಬಿ.ಸಿ ರೋಡ್ ನಲ್ಲಿ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಶಾಖೆ ಉದ್ಘಾಟನೆ

ಬಂಟ್ವಾಳ, ಜ.12: ಕುಟುಂಬಸ್ಥರ ಭವಿಷ್ಯದ ಬಗ್ಗೆ ಯಜಮಾನನಲ್ಲಿರುವ ಭಯವನ್ನು ಇನ್ಶೂರೆನ್ಸ್ ಸೌಲಭ್ಯ ದೂರಮಾಡುವುದರ ಮೂಲಕ ಜೀವನದಲ್ಲಿ ಆತ್ಮ ವಿಶ್ವಾಸವನ್ನುಂಟು ಹೆಚ್ಚಿಸುತ್ತದೆ ಎಂದು ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಹೇಳಿದರು.
ಬಿ.ಸಿ.ರೋಡಿನ ಭಾರತ್ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ನ ನೂತನ ಶಾಖೆಯನ್ನು ಗುರುವಾರ ಬೆಳಗ್ಗೆ ಉದ್ಘಾಟಿಸಿ ಬಳಿಕ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬಿ.ಸಿ.ರೋಡ್ ನಗರದಲ್ಲಿ ಈ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಹೆಚ್ಚು ಜನಪ್ರೀಯವಾಗಲಿ ಎಂದು ಅವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಶೈಲಜಾ ರಾಜೇಶ್, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್‌ನ ಸುರತ್ಕಲ್ ಯುನಿಟ್ ಮ್ಯಾನೇಜರ್ ರತ್ನಾವತಿ ರಂಜನ್, ಸಂಸ್ಥೆಯ ಮಾಲಕ ಶಶಿ ಕುಡ್ಲ, ಸಿಬ್ಬಂದಿಗಳಾದ ಪ್ರಶಾಂತ್, ಕಾರ್ತಿಕ್, ಮಮತಾ, ಅಶ್ವಿತಾ, ಅಕ್ಷತಾ, ಶ್ರುತಿ, ವೀಣಾ, ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.





