ಉತ್ತರಪ್ರದೇಶ ವಶಕ್ಕೆ ಬಿಜೆಪಿಯಿಂದ ಹೊಸ ತಂತ್ರ

ಲಕ್ನೊ,ಜ.12: ಉತ್ತರಪ್ರದೇಶ ಚುನಾವಣೆಯ ಪ್ರಚಾರಕಾರ್ಯಕ್ಕಾಗಿ ಬಿಜೆಪಿ ವಾರ್‌ರೂಂನ್ನು ಸಂಪೂರ್ಣ ಸಜ್ಜುಗೊಳಿಸಿದೆ. ರಾಜ್ಯದ ಅಧಿಕಾರ ಹಿಡಿಯಲು ಪ್ರಧಾನಮಂತ್ರಿ ನರೇಂದ್ರಮೋದಿಯ ಹತ್ತು ಮೆಗಾರ್ಯಾಲಿ ಸಹಿತ ಹಲವಾರು ರೀತಿಯ ಪ್ರಚಾರ ಕಾರ್ಯಕ್ರಮಗಳನ್ನು ಉತ್ತರಪ್ರದೇಶ ಬಿಜೆಪಿ ಹಮ್ಮಿಕೊಳ್ಳಲಿದೆ. ಬಿಜೆಪಿಯ ಹಿರಿಯ ನಾಯಕರು, ಐಐಟಿಯ ತಂತ್ರಜ್ಞರು ಬಿಜೆಪಿಯ ವಾರ್‌ರೂಮ್‌ನ ಭಾಗವಾಗಲಿದ್ದಾರೆ.
ವೀಡಿಯೊ ವ್ಯಾನ್, ವಾಹನ ಪ್ರಚಾರ, ನಾಯಕರ ಚುನಾವಣಾ ಪ್ರಚಾರ ಮುಂತಾದುವುಗಳನ್ನು ಬಿಜೆಪಿ ರೂಪಿಸಿದೆ. ವಾಹನಪ್ರಚಾರ ಕಾರ್ಯಕ್ರಮಕ್ಕೆ ಈಬಾರಿ 30ಲಕ್ಷ ಮತದಾರರನ್ನು ತಲುಪಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಅದೇವೇಳೆ ಸೋಶಿಯಲ್ ಮೀಡಿಯ ಮೂಲಕ ಹನ್ನೆರಡು ಲಕ್ಷ ಮಂದಿಯನ್ನು ತಲುಪಬಹುದೆಂದು ಪಕ್ಷದ ಚಿಂತನೆಯಾಗಿದೆ.
400 ವೀಡಿಯೊ ವ್ಯಾನ್‌ಗಳು, 1650 ದ್ವಿಚಕ್ರ ವಾಹನಗಳನ್ನು ಬಿಜೆಪಿ ಪ್ರಚಾರಾರ್ಥ ಸಜ್ಜುಗೊಳಿಸಿದೆ. ಮತದಾರರಿಂದ ಸಂಗ್ರಹಿಸಿದ 20ಲಕ್ಷಕ್ಕೂ ಅಧಿಕ ಬೇಡಿಕೆಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲು ಬಿಜೆಪಿ ಯೋಚಿಸಿದೆ.ಪ್ರಚಾರಕ್ಕೆ 8,000 ವಾಟ್ಸ್ ಅಪ್ ಗ್ರೂಪ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.ಮೋದಿಯ ಬೃಹತ್ ರ್ಯಾಲಿ ಬಿಜೆಪಿಯ ಮುಖ್ಯ ಪ್ರಚಾರ ಅಸ್ತ್ರವಾಗಿದೆ.
ಚುನಾವಣೆಯ ಪ್ರತಿಯೊಂದೂ ಹಂತದಲ್ಲಿ ಕನಿಷ್ಠ ಮೋದಿಯ ಒಂದು ರ್ಯಾಲಿಯಾದರೂ ಇರಲಿದೆ. ಈ ತಿಂಗಳ ಕೊನೆಯಲ್ಲಿ ಅಲಿಗಡದಲ್ಲಿ ಅಥವಾ ಮುಝಪ್ಫರ್ ನಗರ್‌ನಲ್ಲಿಮೋದಿಯ ಪ್ರಥಮರ್ಯಾಲಿ ನಡೆಯಲಿದೆ.ಹಳೆ ರೀತಿಯ ಪ್ರಚಾರ ತಂತ್ರಗಳನ್ನು ಬಿಜೆಪಿ ತೊರೆದಿಲ್ಲ. ಮಾತಿ ತಿಲಕ ಪ್ರತಿಜ್ಞಾ ಎಂಬ ಹೆಸರಿನಲ್ಲಿ 75 ಪ್ರದೇಶಗಳಲ್ಲಿ ರೈತರ ಸಂಗಮ ನಡೆಯಲಿದೆ. ಜನವರಿ 13ರಂದುರೈತ ಸಂಗಮ ಆರಂಭವಾಗಲಿದೆ.ಫೆಬ್ರವರಿಎಂಟರಿಂದಮಾರ್ಚ್‌ಹನ್ನೊಂದರವರೆಗೆ ಏಳುಹಂತದಲ್ಲಿಉತ್ತರಪ್ರದೇಶ ಚುನಾವಣೆ ನಡೆಯಲಿದೆ ಎಂದು ವರದಿಯಾಗಿದೆ.







