ಜ.14: ಲಯನ್ಸ್ ಕ್ಲಬ್ ಸಮ್ಮಿಲನ
ಮಂಗಳೂರು, ಜ.12: ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವ ಪ್ರಯುಕ್ತ ಲಯನ್ಸ್ ಜಿಲ್ಲಾ 317 ಡಿ ಇದರ ಪ್ರಾಂತ 5ರ ಸಮ್ಮಿಲನ ಜ.14 ರಂದು ಸಂಜೆ 4 ಗಂಟೆಗೆ ಪಣಂಬೂರಿನ ಜೆಎನ್‌ಸಿ ಸಭಾಂಗಣದಲ್ಲಿ ನಡೆಯಲಿದೆ ಪ್ರಾಂತೀಯ ಅಧ್ಯಕ್ಷ ಮೊಯ್ದಿನ್ ಕುಂಞಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಟ್ಟೆ ವಿವಿ ಕುಲಪತಿ ವಿನಯ ಹೆಗ್ಡೆ, ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಅಧಿಕಾರಿ ಡಾ. ಡೆರಿಕ್ ಲೋಬೊ ಹಾಗೂ ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪ್ರಾಂತದ 8 ಸೇವಾ ಕ್ಲಬ್‌ಗಳ ಸುಮಾರು 500 ಮಂದಿ ಸದಸ್ಯರು ಪಾಲ್ಗೊಳ್ಳುವರು. ಈ ಸಂದರ್ಭ ಲಯನ್ಸ್ ವಿಶೇಷಚೇತನ ಮಕ್ಕಳ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾ, ನೂತನ ಸೋಲಾರ್ ಘಟಕ ಅಳವಡಿಕೆ ಉದ್ಘಾಟನೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಪದಾಧಿಕಾರಿಗಳಾದ ಜೀವನ್ ಬೆಳ್ಯಪ್ಪ ಹಾಗೂ ವಿಶ್ವನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story





