ಜ.15: ಸಮಸ್ತ ಆದರ್ಶ ಸಮ್ಮೇಳನ
ಮಂಗಳೂರು, ಜ.12: ತಲಪಾಡಿ ಕೆ.ಸಿ.ರೋಡ್‌ನ ಕೈರಳಿ ಕಟ್ಟಡದಲ್ಲಿರುವ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ವಾರ್ಷಿಕ ಕಾರ್ಯಕ್ರಮ ‘ಸಮಸ್ತ ಆದರ್ಶ ಮಹಾ ಸಮ್ಮೇಳನ’ ಜ.15 ರಂದು ಸಂಜೆ 4:30ಕ್ಕೆ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ ಎಂದು ಶಂಸುಲ್ ಉಲಮಾ ಸೆಂಟರ್‌ನ ಅಧ್ಯಕ್ಷ ಅಬ್ದುಸ್ಸಲಾಂ ಉಚ್ಚಿಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಅಸೈಯದ್ ಇಬ್ರಾಹೀಂ ಬಾತಿಷ್ ತಂಙಳ್ ದುಅ ನೆರವೇರಿಸುವರು. ಅಸೈಯದ್ ಝೈನುದ್ದೀನ್ ಜಿಫ್ರಿ ತಂಙಳ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸುವರು. ಅಬ್ದುಸಮದ್ ಪೂಕೋಟೂರು ಮತ್ತು ಅನೀಸ್ ಕೌಸರಿ ಪುತ್ತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ, ಸೈಫುಲ್ಲಾ ತಂಙಳ್ ಉದ್ಯಾವರ, ಅಸೈಯದ್ ಬದ್ರುದ್ದೀನ್ ತಂಙಳ್, ಹಾಶಿರ್ ಹಾಮಿದಿ, ಇಬ್ರಾಹೀಂ ಬಾಖವಿ, ಸಚಿವ ಯು.ಟಿ.ಖಾದರ್, ಮಾಜಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ಹಮೀದ್ ಕೆ.ಸಿ. ರೋಡ್, ಇಬ್ರಾಹೀಂ ಬಾಖವಿ ಅಬ್ದುಸ್ಸಲಾಂ ರಾಯಪಟ್ಟಣ, ಹಸೈನಾರ್ ಉಪಸ್ಥಿತರಿದ್ದರು.





