ಉಳ್ಳಾಲ: ಸಾಮೂಹಿಕ ಸ್ವಚ್ಛತಾ ಆಂದೋಲನ-2017 ಕಾರ್ಯಕ್ರಮ

ಉಳ್ಳಾಲ,ಜ.12: ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲ ನಗರಸಭೆ ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ಗುರುವಾರ ಸಾಮೂಹಿಕ ಸ್ವಚ್ಛತಾ ಆಂದೋಲನ-2017 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರು, ಸ್ವಚ್ಛತೆಗೆ ಇಸ್ಲಾಂನಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಮನೆ, ಪರಿಸರ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನಸರಿಸುವವರಿಂದ ಶರೀರ ಸ್ವಚ್ಛತೆಯೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇಂದು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದರೂ ಕೆಲವು ಕಶ್ಮಲ ಮನಸ್ಸು, ಅಶುದ್ಧ ಹೃದಯಗಳಿಂದಾಗಿ ಅಶುಚಿತ್ವ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ದರ್ಗಾ ವಠಾರ, ಮಾಸ್ತಿಕಟ್ಟೆ, ಮೇಲಂಗಡಿ ಮತ್ತು ತೊಕ್ಕೊಟ್ಟು ಪರಿಸರದಲ್ಲಿ ಸ್ವಚ್ಛತೆ ನಡೆಯಿತು.
ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ, ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಇಬ್ರಾಹಿಂ ಅಳೇಕಲ, ದರ್ಗಾ ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಅರಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಯು.ಟಿ.ತಂಝಿಲ್, ಸಲೀಮ್ ಮಾಸ್ತಿಕಟ್ಟೆ, ಎಚ್.ಕೆ.ಮುಹಮ್ಮದ್, ಹಸನ್ ಕೈಕೊ, ಮುಸ್ತಪ ಮಂಚಿಲ, ಕಾಸಿಮ್ ಕೋಡಿ, ದರ್ಗಾ ವ್ಯವಸ್ಥಾಪಕ ಯು.ಎಂ.ಯೂಸುಫ್, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ದರ್ಗಾ ಕಾರ್ಯ ನಿರ್ವಹಣಾಧಿಕಾರಿ ಸಯ್ಯಿದ್ ಶಿಹಾಬ್, ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಡಿ.ಬಿ.ಮೊಯ್ದೀನ್, ಮಾಸ್ತಿಕಟ್ಟೆ ಹಝ್ರತ್ ಶಾಲೆಯ ಮುಖ್ಯ ಶಿಕ್ಷಕ ಇಮ್ತಿಯಾರ್, ಕಲ್ಲಾಪು ಶಾಲೆಯ ಮುಖ್ಯ ಶಿಕ್ಷಕಿ ನಸೀಮ, ಅಳೇಕಲ ಶಾಲೆ ಮುಖ್ಯ ಶಿಕ್ಷಕಿ ರಮ್ಲತ್, ಹಝ್ರತ್ ಹೆಣ್ಮಕ್ಕಳ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಭಾರತಿ ಮತ್ತು ಶಿಕ್ಷಕರು ಭಾಗವಹಿಸಿದ್ದರು.







