ಕೊಂಕಣಿ ಲೋಕೋತ್ಸವದಲ್ಲಿ ಕವಿಗೋಷ್ಠಿಗೆ ಆಹ್ವಾನ
ಮಂಗಳೂರು, ಜ. 12: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದ ಎರಡನೆಯ ದಿನವಾದ ಫೆ. 12ರಂದು ಪುರಭವನದ ವೇದಿಕೆಯಲ್ಲಿ ಕೊಂಕಣಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕೊಂಕಣಿಯ ಯಾವುದೇ ಪ್ರಭೇದದಲ್ಲಿ ಕವಿತೆಯನ್ನು ವಾಚಿಸಬಹುದಾಗಿದ್ದು, ನಿಯಮಿತ ಕವಿಗಳಿಗೆ ಅವಕಾಶವಿದೆ. ಆಸಕ್ತರು ಜ.25ರೊಳಗೆ ಅಕಾಡಮಿ ಕಚೇರಿಯಲ್ಲಿ ಹೆಸರು ನೊಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





