15ರಂದು ಶಿಕ್ಷಕರ ಅರ್ಹತಾ ಪರೀಕ್ಷೆ
ಮಂಗಳೂರು, ಜ. 12: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಜ.15ರಂದು ರಾಜ್ಯಾದ್ಯಂತ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪರೀಕ್ಷೆಯು ಬೆಳಗ್ಗೆ ಮಿಲಾಗ್ರಿಸ್ ಪ.ಪೂ. ಕಾಲೇಜು ಹಂಪನಕಟ್ಟ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯರ ಪ್ರೌ.ಶಾಲೆ, ಕೆನರಾ ಪ್ರೌ.ಶಾಲೆ, ಪದುವ ಪ್ರೌಢಶಾಲೆ ನಂತೂರು ಇಲ್ಲಿ ನಡೆಯಲಿದೆ. ಅಪರಾಹ್ನ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಮಿಲಾಗ್ರಿಸ್ ಪ.ಪೂ. ಕಾಲೇಜು ಹಂಪನಕಟ್ಟ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯ ಪ್ರೌಢ ಶಾಲೆ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯರ ಪ್ರೌ.ಶಾಲೆ, ಕೆನರಾ ಪ್ರೌ.ಶಾಲೆ, ಉರ್ವಾ ಮಂಗಳೂರು, ಪದುವ ಪ್ರೌಢಶಾಲೆ ನಂತೂರ್, ಸೈಂಟ್ ಆನ್ಸ್ ಪ್ರೌಢ ಶಾಲೆ,ಮಂಗಳೂರು, ಸೈಂಟ್ ಮೇರಿ ಬಾಲಕಿಯರ ಪ್ರೌಢ ಶಾಲೆ ಫಳ್ನೀರ್, ಕಪಿತಾನಿಯೊ ಪ್ರೌಢ ಶಾಲೆ ಕಂಕನಾಡಿಗಳಲ್ಲಿ ನಡೆಯಲಿವೆ.
ಈ ಪರೀಕ್ಷೆಗೆ ಹಾಜರಾಗಲು ಪೂರ್ವಾಹ್ನ 1387 ಮತ್ತು ಅಪರಾಹ್ನ 2364 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಟಿ.ಇ.ಟಿ ಪರೀಕ್ಷೆಯ ಪ್ರಥಮ ಪತ್ರಿಕೆಯು ಪೂರ್ವಾಹ್ನ 9 ಗಂಟೆಯಿಂದ 12 ಗಂಟೆಯವರೆಗೆ ಮತ್ತು ದ್ವಿತೀಯ ಪತ್ರಿಕೆಯು ಅಪರಾಹ್ನ ಗಂಟೆ 1:30 ರಿಂದ 4.30ರ ವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಅವರ ಪ್ರವೇಶ ಪತ್ರದಲ್ಲಿ ಹಂಚಿಕೆ ಮಾಡಲಾದ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದೊಂದಿಗೆ ಕ್ಲಪ್ತ ಸಮಯದಲ್ಲಿ ಹಾಜರಾಗುವಂತೆ ಸೂಚಿಸಿದೆ. ಪರೀಕ್ಷೆಯು ಸುಸೂತ್ರವಾಗಿ ನಡೆಸುವ ಬಗ್ಗೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







